ಮೂಲ ಸೌಕರ್ಯದ ವಿರುದ್ಧ ಸ್ಥಳಿಯರ ಆಕ್ರೋಶ

ಮಂಗಳವಾರ, 13 ಜುಲೈ 2021 (20:22 IST)
ಕೆಂಗೇರಿ ಬಳಿಯ ಬಂಡೆಮಟ್ ಬಡಾವಣೆಯನ್ನು ಒಂದು ದಶಕದ ಹಿಂದೆಯೇ ಕರ್ನಾಟಕ ವಸತಿ ಮಂಡಳಿ ಅಭಿವೃದ್ಧಿಪಡಿಸಿದೆ. ಆದರೆ ಇಂದಿನ ರಸ್ತೆ, ಚರಂಡಿ ಮತ್ತು ಫುಟ್ಪಾತ್ಗಳು ಕೆಟ್ಟ ಪರಿಸ್ಥಿಯಲ್ಲಿದೆ. ಸರ್ಕಾರ ತಮ್ಮ ಲೇಓಟ್ ನನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನ್ಯಾಯವ್ಯಾಪ್ತಿಗೆ ಸೇರಿಸಬೇಕೆಂದು ಅಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ. ಆ ಏರಿಯ ಮೂಲಭೂತ ಕ್ರಿಯಾತ್ಮಕ ಮೂಲಸೌಕರ್ಯತೆಗಳನ್ನು ಹೊಂದಿಲ್ಲ ಮತ್ತು ಮಳೆ ನೀರಿನ ಚರಂಡಿಗಳು ಒಳ ಚರಂಡಿ ನೀರಿನಿಂದ ತುಂಬಿವೆ ಹಾಗೂ ರಸ್ತೆಗಳು ಸಹ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ಮುಚ್ಚಿಹೋಗಿರುವ ಚರಂಡಿಗಳಿAದ ಬರುವ ದುರ್ವಾಸನೆಯು ಮತ್ತು ಸೊಳ್ಳೆಗಳ ಕಾಟ ಅಲ್ಲಿನ ನಿವಾಸಿಗಳಿಗೆ ದೊಡ್ಡ ಸಮಸ್ಯೆಯಾಗಿದೆ. ಬಂಡೆಮಟ್ ಲೇಒಟ್ನಲ್ಲಿ ಉದ್ಯಾನವನವನ್ನು ಅಭಿವೃದ್ಧಿಪಡಿಸಲು ಕೆ.ಹೆಚ್.ಬಿ ಒಂದು ಸೈಟ್ ಅನ್ನು ನಿಯೋಜಿಸಿದೆ ಆದರೆ ಫೆನ್ಸಿಂಗ್ ಮಾಡುವುದಕ್ಕಿಂತ ಹೆಚ್ಚಿನದನ್ನು ಮಾಡಿಲ್ಲ. ಸೈಟ್ ನ ಸುತ್ತಾ ಮುತ್ತಾ ಕಳೆಗಳು ಆವೃತ್ತಿಯಾಗಿದ್ದು ಹಾವುಗಳಿಗೆ ಮನೆಯಾಗಿದೆ.
ಅಸೆಂಬ್ಲಿಯಲ್ಲಿ ವಸತಿ ಸಚಿವರು ಬಂಡೆಮಟ್ ವಿನ್ಯಾಸವನ್ನು ಬಿಬಿಎಂಪಿ ವ್ಯಾಪ್ತಿಗೆ ವರ್ಗಾಯಿಸುವುದು ಅಂತಿಮ ಹಂತದಲ್ಲಿದೆ ಎಂದು ಹೇಳಿದರು ಆದರೆ ನಂತರ ಏನೂ ಸಂಭವಿಸಿಲ್ಲ 
ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಬೇಡಿಕೆಗಳನ್ನು ಈಡೇರಿಸಲು ಈ-ಮೇಲ್ ಮೂಲಕ ಎಸ್.ಟಿ ಸೋಮಶೇಖರ್ ಮತ್ತು ಬಿ.ಎಸ್ ಎಡಿಯೂರಪ್ಪನವರಿಗೆ ಪತ್ರವನ್ನು ಕಳುಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ