ಮುಂಬೈ : ಮೃತ ವೈಶಾಲಿಗೆ ಈಗಾಗಲೇ ಮದುವೆಯಾಗಿದ್ದು, ಆಕೆಗೆ ಆರು ತಿಂಗಳ ಮಗು ಕೂಡ ಇತ್ತು. ತನ್ನ ಶಿಕ್ಷಣವನ್ನು ಮುಂದುವರಿಸಲು ಇಚ್ಚಿಸಿದ ವೈಶಾಲಿ ಸಾಂಗ್ಲಿಯಲ್ಲಿರುವ ಯಶ್ವಂತ್ರಾವ್ ಚವಾಣ್ ಮುಕ್ತ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಅಲ್ಲಿ ಶಿಕ್ಷಕನಾಗಿದ್ದ ರಿಷಿಕೇಶ್ ಮೋಹನ್ ಕುಡಲ್ಕರ್ ವೈಶಾಲಿಗೆ ತನ್ನ ಜೊತೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ವೈಶಾಲಿ ಒಪ್ಪದಿದ್ದಾಗ ಕೋಪಗೊಂಡ ಶಿಕ್ಷಕ ಆಕೆಯನ್ನು ಕೊಲೆ ಮಾಡಿದ್ದಾನೆ.
ವೈಶಾಲಿ ಮುಲಿಕ್ (21) ಕೊಲೆಯಾದ ವಿದ್ಯಾರ್ಥಿನಿ. ರಿಷಿಕೇಶ್ ಮೋಹನ್ ಕುಡಲ್ಕರ್ (27)ಕೊಲೆ ಮಾಡಿದ ಆರೋಪಿಯಾಗಿದ್ದು, ಈತ ಯಶ್ವಂತ್ರಾವ್ ಚವಾಣ್ ಮುಕ್ತ ವಿವಿಯಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದನು. ಮೃತ ವೈಶಾಲಿ ಮತ್ತು ಶಿಕ್ಷಕ ಒಂದೇ ಗ್ರಾಮದವರಾಗಿದ್ದು ಪರಸ್ಪರ ಇಬ್ಬರಿಗೂ ಪರಿಚಯ ವಿತ್ತು. ಇಬ್ಬರ ಮಧ್ಯೆ ಸಂಬಂಧ ಕೂಡ ಇತ್ತು ಎಂದು ವರದಿಯಾಗಿದೆ.