ಕೊಲೆಗಡುಕನ ಮನೆಗೆ ಬುಲ್ಡೋಜರ್‌ನಲ್ಲಿ ಕೆಡವಬೇಕು: ಪ್ರಮೋದ್ ಮುತಾಲಿಕ್
ಈ ಹಿಂದೆ ಕಾಂಗ್ರೆಸ್ ಬ್ರಿಟಿಷರ ಪರವಿದ್ದರು. ಇದೀಗ ಮುಸ್ಲಿಂ ಕೊಲೆಗಡುಗರ ಪರವಿದೆ. ಕೊಲೆಗಡುಕನ ಮನೆಗೆ ಬುಲ್ಡೋಜರ್ ಹತ್ತಿಸಿ ಕಿತ್ತು ಬಿಸಾಕಬೇಕು. ಜಮಾತೆ ಇಸ್ಲಾಮಿನವರು ಕೂಡಲೆ ಫತ್ವಾ ಹೊರಡಿಸಿ ಮನೆ ಬಹಿಷ್ಕರಿಸಬೇಕು ಎಂದರು.
ವಕೀಲರು ಅವನ ಪರ ನಿಲ್ಲಬಾರದು. ಲವ್ ಮಾಡಿ ಮತಾಂತರ ಮಾಡಲು ಮುಂದಾಗಿದ್ದ. ಲವ್ ಜಿಹಾದ್ ಯಶಸ್ವಿಯಾಗಲಿಲ್ಲವೆಂದು ಕೊಲೆ ಮಾಡಿದ್ದಾನೆ. ಎಲ್ಲಿಯವರೆಗೆ ಕಾಂಗ್ರೆಸ್ ಇರುತ್ತದೋ ಅಲ್ಲಿಯವರೆಗೆ ಈ ರೀತಿ ಕೊಲೆಗಳಾಗುತ್ತವೆ. ರಾಜ್ಯದಲ್ಲೂ ಯುಪಿ ಮಾದರಿ ಬುಲ್ಡೋಜರ್ ಸಂಸ್ಕೃತಿ ಜಾರಿಯಾದಾಗ ಮಾತ್ರ ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ದೊರೆಯಲು ಸಾಧ್ಯ ಎಂದರು.