ದೇವಾಲಯ ವಿಚಾರವಾಗಿ ಸಿಲಿಕಾನ್ ಸಿಟಿಯಲ್ಲಿ ಹಿಂದೂ ಕಾರ್ಯಕರ್ತರಲ್ಲಿ ಧರ್ಮಕಾಳಗ ಶುರುವಾಗಿದೆ. ಪುರಾತನ ದೇವಾಲಯದ ವಿಷಯವಾಗಿ ಹಿಂದೂ ಕಾರ್ಯಕರ್ತರು ರೊಚ್ಚಿಗೆದ್ದಿದ್ದು, ಮುಸ್ಲಿಂ ಅಂಗಡಿ- ಮುಂಗಟ್ಟುಗಳನ್ನ ಮುಚ್ಚಿಸಿದ್ದಾರೆ...ಆದ್ರು ಸುಮ್ಮನಾಗದ ಹಿಂದೂ ಕಾರ್ಯಕರ್ತರು ದೊಡ್ಡ ಹೈಡ್ರಾಮವೇ ಮಾಡಿದ್ದಾರೆ.ಶಿವಮೊಗ್ಗ , ಕರಾವಳಿ ಭಾಗದಲ್ಲಿ ಹೊತ್ತಿಕೊಂಡ ಧರ್ಮದ ಕಿಚ್ಚು ಬೆಂಗಳೂರಿನಲ್ಲಿಯೂ ಶುರುವಾಗಿದೆ.
ಹಿಜಾಬ್ ವಿವಾದ ಮುಗಿದ ನಂತರ ಈಗ ಮತ್ತೊಂದು ವಿವಾದದ ಕಿಡಿ ಹೊತ್ತಿಕೊಳ್ಳುವ ಭೀತಿ ಎದುರಾಗಿದೆ. ಇಷ್ಟು ದಿನ ಇಲ್ಲದ ಧರಣಿ ಇಂದು ನಗರದ ಉಪ್ಪಾರಪೇಟೆಯ ಅಂಜನೇಯಸ್ವಾಮಿ ದೇವಾಲಯದ ಮುಂದೆ ನಡೆದಿದೆ.ಸುಮಾರು 30 ಕ್ಕೂ ಹಿಂದೂ ಕಾರ್ಯಕರ್ತರು ದೇವಾಲಯದ ಮುಂದಿದ್ದ ಚಪ್ಪಲಿ ಅಂಗಡಿಗಳನ್ನ ಮುಚ್ಚಿಸಿದ್ದಾರೆ. ಸುಮಾರು 300 , 400 ವರ್ಷದ ಹಳೆಯ ಪುರಾತನ ದೇವಾಲಯದ ಜೀರ್ಣೋದರ ಕೆಲಸವಾಗಿಲ್ಲ.ದೇವಾಲಯದ ಅಭಿವೃದ್ಧಿ ಕಡೆ ಯಾರು ಗಮನಹಾರಿಸಿಲ್ಲ ಎಂದು ಕಾರ್ಯಕರ್ತರು ಅಸಾಮಾಧಾನಗೊಂಡು ಕೆಲಕಾಲ ಧರಣಿ ನಡೆಸಿದ್ದಾರೆ.ರಾಜ್ಯದಲ್ಲಿ ಧರ್ಮಯುದ್ಧ ಶುರುವಾಗಿದ್ದು ವ್ಯಾಪಾರದ ಅಂಗಳಕ್ಕೂ ಮತೀಯ ಫೈಟ್ ಕಾಲಿಟ್ಟಿದೆ. ಮುಸ್ಲಿಂ ವ್ಯಾಪಾರಿಗಳು ದೇವಾಲಯದ ಮುಂದೆ ಇರಬಾರದೆಂದು ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಕರಾವಳಿಯಿಂದ ಹಬ್ಬಿದ್ದ ಹಿಜಾಬ್ ಇಡೀ ರಾಜ್ಯವನ್ನ ಈಗ ಸುತ್ತುವರೆದಿದೆ. ಬೆಂಗಳೂರಿನ ಉಪ್ಪಾರಪೇಟೆಯಲ್ಲಿ ಮುಸ್ಲಿಂ ವ್ಯಾಪಾರಿಗಳು ಅಂಗಡಿಗಳನ್ನ ಮುಚ್ಚಿಕೊಂಡು ಮನೆ ಸೇರಿದ್ದಾರೆ. ಅಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದ ಫುಟ್ ಪಾತ್ ನಲ್ಲಿ ಕುಳಿತು ಸುಮಾರು ಗಂಟೆಗಳ ಕಾಲ ಹಿಂದೂ ಕಾರ್ಯಕರ್ತರು ಪ್ರತಿಭಟನೆ ಮಾಡ್ತಾರೆ. ತದನಂತರ ಸ್ಥಳಕ್ಕೆ ಮುಜಾರಾಯಿ ಇಲಾಖೆಯ ತಹಸಿಲ್ದಾರ್, ಮ್ಯಾನೇಜರ್ , ಪೊಲೀಸರು ದೌಡಯಿಸ್ತಾರೆ. ಕೊನೆಗೆ ಪ್ರತಿಭಟನೆಯನ್ನ ಹತ್ತಿಕುವಲ್ಲ ಪೊಲೀಸರು ಯಶಸ್ವಿಯಾಗ್ತಾರೆ.ಇತ್ತ ಸ್ಥಳಕ್ಕೆ ಆಗಮಿಸಿದ ದೇವಾಲಯದ ಮ್ಯಾನೇಜರ್ ಸಮಸ್ಯೆ ಬಗೆಹಾರಿಸುತ್ತೇವೆಂದು 30 ದಿನಗಳ ಕಾಲ ಗಡುವು ತೆಗೆದುಕೊಂಡಿದ್ದಾರೆ. ದೇವಾಲಯದ ಬಳ್ಳಿ ಇರುವ ಅಂಗಡಿಗಳನ್ನ ಟೆಂಡರ್ ತೆಗೆದುಕೊಂಡಿದ್ದು ಲೀಸ್ ಗೆ ಕೊಟ್ಟಿದ್ದಾರೆ . 8 ಅಂಗಡಿಗಳಲ್ಲಿ 2 ಅಂಗಡಿ ಮುಸ್ಲಿಂ ಅವರಿಗೆ ಕೊಟ್ಟಿದ್ದಾರೆ . ಇದೇ ಈಗ ದೊಡ್ಡ ವಿಷಯವಾಗಿ ರಂಪಾಟ-ರದಾಂತಕ್ಕೆ ಕಾರಣವಾಗಿದೆ. ಇನ್ನು ಸ್ಥಳದಲ್ಲಿ ಹಿಂದೂ ಕಾರ್ಯಕರ್ತರು ಮುಸ್ಲಿಂ ರವರಿಗೆ ಯಾಕೆ ? ಅಂಗಡಿಗಳನ್ನ ಕೊಟ್ಟಿದೀರಾ ? ಎಂದು ಪ್ರಶ್ನೆ ಮಾಡಿದಕ್ಕೆ ಈಗ ಮ್ಯಾನೇಜರ್ ಇನ್ಮುಂದೆ ಮುಸ್ಲಿಂ ಸಮುದಾಯಕ್ಕೆ ಅಂಗಡಿ ಕೊಡುವುದಿಲ್ಲ ಖಾಲಿ ಮಾಡಿಸ್ತೇವೆ ಎಂದು ಹೇಳಿದ್ದಾರೆ.ದೇವಾಲಯದ ಆವರಣದಲ್ಲಿರುವ ಅಂಗಡಿಗಳನ್ನ ಸದ್ಯದ ಮಟ್ಟಿಗೆ ಮುಚ್ಚಿಸಲಾಗಿದೆ. ಆದ್ರೆ ನಾಳೆ ಹೀಗೆ ಇದ್ರೆ ಬಚ್ಚಾವ್ ,ಒಂದು ವೇಳೆ ಅಂಗಡಿಗಳನ್ನ ತೆರೆದ್ರೆ ಬೂದಿ ಮುಚ್ಚಿದ ಕೆಂಡದಂತೆ ಇರುವ ಸಮಸ್ಯೆ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ