ಮೈಸೂರಿಗೆ ಎರಡನೇ ಸ್ಥಾನ..!!

ಭಾನುವಾರ, 2 ಅಕ್ಟೋಬರ್ 2022 (15:25 IST)
ಸಾಂಸ್ಕೃತಿಕ ನಗರಿ ಮೈಸೂರುಗೆ ಮತ್ತೆ ಎರಡನೇ ಸ್ವಚ್ಛ ನಗರಿಯ ಗೌರವ ಲೌಯವಾಗಿದೆ. ಸ್ವಚ್ಚ ಸರ್ವೇಕ್ಷಣೆಯಲ್ಲಿ 3 ರಿಂದ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಮೈಸೂರು ನಗರದ ಎರಡನೇ ಸ್ಥಾನ ಪಡೆದಿದೆ. ಕಳೆದ ಬಾರಿ 2021ರಲ್ಲಿ ಮೈಸೂರು 7ನೇ ಸ್ಥಾನದಲ್ಲಿತ್ತು.
ದೇಶದ ಒಟ್ಟಾರೆ ಎಲ್ಲಾ ವಿಭಾಗಗಳ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು 8ನೇ ಸ್ಥಾನದಲ್ಲಿದೆ. ದೇಶದ ಒಟ್ಟಾರೆ ಎಲ್ಲಾ ವಿಭಾಗಗಳ ಸರ್ವೇಕ್ಷಣೆಯಲ್ಲಿ ಮೈಸೂರು 8 ನೇ ಸ್ಥಾನದಲ್ಲಿದೆ. ಸ್ವಚ್ಛ ಸರ್ವೇಕ್ಷಣೆಗೆ ಸಂಬಂದಿಸಿದಂತೆ ಕೇಂದ್ರ ನಗರಾಬಿವೃದ್ಧಿ ಸಚಿವಾಲಯದಿಂದ ಜನವರಿ ತಿಂಗಳಿನಲ್ಲಿ ಮೈಸೂರು ಸುತ್ತ ಮುತ್ತ ಸರ್ವೇಕ್ಷಣಾ ಸರ್ವೇ ನಡೆಸಲಾಗಿತ್ತು. ಈ ಸ್ಪರ್ಧೆಯಲ್ಲಿ 1,850 ಕ್ಕೂ ಹೆಚ್ಚು ನಗರಗಳು ಭಾಗವಹಿಸಿದ್ದವು.
 
ಹೊಸದಿಲ್ಲಿಯ ತಲ್‌ ಕಟೋರಾ ಸ್ಟೇಡಿಯಂ ನಲ್ಲಿ ಶನಿವಾತ ನಡೆದ ಸಮಾಸರಂಭದಲ್ಲಿ ನಗರಾಭಿವೃದ್ಧಿ ಸಚಿವ ಹರ್ದೀವ್‌ ಪುರಿ ಸಿಂಗ್‌ ಪ್ರಶಸ್ತಿ ಪ್ರಧಾನ ಮಾಡಿದರು. ಮೈಸೂರು ಮಹಾನಗರಪಾಲಿಕೆಯ ಮಹಾಪೌರರಾದ ಶಿವಕುಮಾರ್‌ ಉಪ ಮಹಾಪೌರರಾದ ಡಾ ಜಿ ರೂಪ ಹಾಗೂ ಆಯುಕ್ತ ಲಕ್ಷ್ಮೀ ಕಾಂತ ರೆಡ್ಡಿ ಅವರು ಪ್ರಶಸ್ತಿ ಸ್ವೀಕರಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ