ನೋಟು ಅಮಾನ್ಯದಿಂದ ಜ್ಞಾನ, ವಿಚಾರಗಳನ್ನು ಅಲುಗಾಡಿಸಲಾಗದು

ಶನಿವಾರ, 24 ಡಿಸೆಂಬರ್ 2016 (12:02 IST)
ಅನಿಶ್ಚಿತತೆ, ದುರ್ಬಲ ಆರ್ಥಿಕತೆ ಮತ್ತು ನೋಟು ಅಮಾನ್ಯತೆಯ ಈ ದಿನಗಳಲ್ಲಿ ಭವಿಷ್ಯದ ಯೋಜನೆಗಳ ಬಗೆಗೆ ಯಾವಾಗಲೂ ಶಂಕೆ ಮತ್ತು ಅನುಮಾನಗಳು ಇರುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
 
ಮೈಸೂರು ವಿಶ್ವವಿದ್ಯಾಲಯ ಶತಮಾನೋತ್ಸವದ ಅಂಗವಾಗಿ 5 ಮತ್ತು 100ರೂ ಮುಖಬೆಲೆಯ ನಾಣ್ಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಸನ್ನಿವೇಶದಲ್ಲಿ ಶಿಕ್ಷಣ ಮತ್ತು ಜ್ಞಾನದಲ್ಲಿ ಹೂಡಿಕೆ ಮಾಡುವುದು ಉತ್ತಮ, ಯಾಕೆಂದರೆ ಯಾವುದೇ ನೋಟು ಬದಲಾವಣೆ ನಿಮ್ಮ ಜ್ಞಾನ ಮತ್ತು ವಿಚಾರಗಳನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಅದು ಅಕ್ಷಯ ಪಾತ್ರೆಯಂತೆ ಜೀವನ ಪೂರ್ತಿ ಉತ್ಪನ್ನ ನೀಡುವ ಎಟಿಎಂ ಆಗಿ ಮುಂದುವರೆಯುತ್ತದೆ ಎಂದರು.
 
ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯ ಶತಮಾನೋತ್ಸವದ ಅಂಗವಾಗಿ ಹೊರತಂದಿರುವ 5 ಹಾಗೂ 100 ರೂ.ಮುಖಬೆಲೆಯ ನಾಣ್ಯಗಳನ್ನು ಬಿಡುಗಡೆಗೊಳಿಸಿದರು. ನಾಣ್ಯಗಳು ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಮೈಸೂರು ವಿವಿ ಕಾರ್ಯಸೌಧ ಕ್ರಾಫರ್ಡ್ ಭವನ ಚಿತ್ರ ಒಳಗೊಂಡಿವೆ. 
 

ವೆಬ್ದುನಿಯಾವನ್ನು ಓದಿ