ನಡಹಳ್ಳಿ ಹೇಳಿಕೆಯಿಂದ ವಿಧಾನಸಭೆ ರಣರಂಗ

ಬುಧವಾರ, 13 ಜುಲೈ 2016 (15:01 IST)
ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವರ ಕೈವಾಡವಿದೆ. ಈ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಎ.ಎಸ್‌.ಪಾಟೀಲ್ ನಡಹಳ್ಳಿ ಹೇಳಿಕೆಯಿಂದ ವಿಧಾನಸಭೆ ರಣರಂಗವಾಗಿ ಪರಿಣಮಿಸಿತು.
 
ವಿಧಾನಸಭೆಯಲ್ಲಿ ಮಾತನಾಡಿದ ಎ.ಎಸ್‌.ಪಾಟೀಲ್ ನಡಹಳ್ಳಿ, ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವರ ಕೈವಾಡವಿದೆ. ಈ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಹೇಳಿದರು. ಈ ಸಮಯದಲ್ಲಿ ಪಕ್ಷಭೇದ ಮರೆತು ಕಾಂಗ್ರೆಸ್‌ನ ಕೆ.ಎನ್.ರಾಜನ್ ಸೇರಿದಂತೆ ಬಿಜೆಪಿ ಶಾಸಕ ಕಾರಜೋಳ, ಲಕ್ಷಣ ಸವದಿ ಮತ್ತು ಹಲವು ನಾಯಕರು ನಡಹಳ್ಳಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.
 
ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದಲ್ಲಿ ಕೈವಾಡವಿರುವ ಮಾಜಿ ಸಚಿವರ ಹೆಸರನ್ನು ಹೇಳಿ ಇಲ್ಲವಾದರೆ ಕಡತದಿಂದ ಹೇಳಿಕೆಯನ್ನು ತೆಗೆದು ಹಾಕಿ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಒತ್ತಾಯಿಸಿದ್ದಾರೆ. ಈ ಸಮಯದಲ್ಲಿ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರು ಹೆಸರು ಹೇಳಿಲ್ಲ ನೀವೆಕೆ ತಲೆ ಕೆಡಿಸಿಕೊಳ್ಳುತ್ತಿರಿ ಎಂದು ಹೇಳಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸುರೇಶ್ ಕುಮಾರ್, ಹೆಸರು ಹೇಳದಿರುವುದೆ ಸಮಸ್ಯೆಯಾಗಿದೆ ಎಂದು ತಿರುಗೇಟು ನೀಡಿದರು. 
 
ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದಲ್ಲಿ ಕೈವಾಡವಿರುವ ಮಾಜಿ ಸಚಿವರ ಹೆಸರನ್ನು ಹೇಳಿ ಇಲ್ಲವಾದರೆ ಕಡತದಿಂದ ಹೇಳಿಕೆಯನ್ನು ತೆಗೆದು ಹಾಕುತ್ತೇನೆ ಎಂದು ಎ.ಎಸ್‌.ಪಾಟೀಲ್ ನಡಹಳ್ಳಿ ಅವರಿಗೆ ಸ್ವೀಕರ್ ಕೆ.ಬಿ.ಕೋಳಿವಾಡ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ