ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರದಲ್ಲಿ ನಾಗ ಪಂಚಮಿ ಪವಾಡ
ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯರ ಮತಕ್ಷೇತ್ರದಲ್ಲಿ ನಾಗ ಪಂಚಮಿ ವಿಶೇಷ ಜರುಗಿದೆ.
ವಿಶ್ವವಿಖ್ಯಾತ ಭೂತನಾಥ ದೇವಸ್ಥಾನದ ಸಮೀಪದ ಬೆಟ್ಟದ ಮೇಲಿಂದ ಕಿರು ಜಲಪಾತ ಮನಮೋಹಕವಾಗಿ ಕಾಣುತ್ತದೆ. ನಿರಂತರ ಮಳೆ ಸುರಿದಾಗ ಮಾತ್ರ ಈ ಜಲಪಾತ ಕೆಲ ಸಮಯ ಸೃಷ್ಟಿ ಯಾಗುತ್ತದೆ. ಎರಡು ಝರಿಗಳಿರುವುದರಿಂದ ಸ್ಥಳೀಯರು ಅಕ್ಕ ತಂಗಿಯರ ದಿಡುಗು ಎಂದು ಈ ಜಲಪಾತಕ್ಕೆ ಹೆಸರಿಟ್ಟಿದ್ದಾರೆ.
ಸತತ ಮಳೆಯಿಂದ ಜಲಪಾತ ಸೃಷ್ಟಿಯಾಗಿದ್ದು, ಇದು ಹಾವಿನ ಆಕಾರದಂತೆ ಕಾಣುವುದರಿಂದ ನಾಗ ಪಂಚಮಿ ವಿಶೇಷ ಎಂದೂ ಜನರು ಹೇಳುತ್ತಿದ್ದಾರೆ. ಅಗಸ್ತ್ಯ ತೀರ್ಥ ಕಲ್ಯಾಣಿ ಮಳೆಯಿಂದ ಭರ್ತಿಯಾಗಿದ್ದು ಜಲವೈಭವ ವೀಕ್ಷಣೆಗೆ ಬಾದಾಮಿ ಜನರು ಭೇಟಿ ನೀಡುತ್ತಿದ್ದಾರೆ.