ನಾಲ್ವಡಿ ಕೃಷ್ಣರಾಜ ಒಡೆಯರ್ ನಾಡಿಗೆ ನೀಡಿದ ಕೊಡುಗೆಗಳ ಪಟ್ಟಿ ಇಲ್ಲಿದೆ ನೋಡಿ

Krishnaveni K

ಶನಿವಾರ, 26 ಜುಲೈ 2025 (16:52 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ಮೈಸೂರು ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಗಿಂತಲೂ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದು ಡಾ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ಹಾಗಿದ್ದರೆ ನಾಲ್ವಡಿ ಕೃಷ್ಣ ರಾಜ ಒಡೆಯರ್ ನಾಡಿಗೆ ನೀಡಿದ ಕೊಡುಗೆಯೇನು ಇಲ್ಲಿದೆ ನೋಡಿ ಪಟ್ಟಿ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ರಾಜರ್ಷಿ, ನಾಡದೊರೆ ಎಂದು ಕರೆಯುತ್ತಾರೆ. ಹೀಗೆ ಅವರಿಗೆ ಸುಮ್ಮನೇ ಬಿರುದು ಕೊಟ್ಟಿಲ್ಲ. ಅವರು ನಾಡಿನ ಒಳಿತಾಗಿ ಮಾಡಿದ ಕೊಡುಗೆ, ಸೇವೆ ಆ ಮಟ್ಟಿಗಿತ್ತು. ಮೈಸೂರು ರಾಜವಂಶಸ್ಥರನ್ನು ಜನ ಇಂದಿಗೂ ಗೌರವಿಸುವುದು ಇದೇ ಕಾರಣಕ್ಕಾಗಿ.

ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಧನೆಗಳ ವಿವರ
-1906 ರಲ್ಲಿ ವಾಣಿ ವಿಲಾಸ ಸಾಗರ ಹಾಗೂ 1932 ರಲ್ಲಿ ಮಂಡ್ಯದ ಕನ್ನಂಬಾಡಿ ಬಳಿ ಕೆಆರ್ ಎಸ್ ಜಲಾಶಯ ನಿರ್ಮಿಸಿದರು. ಇದಕ್ಕೆ ತಮ್ಮ ಕುಟುಂಬದ 158 ಕೆ.ಜಿ. ಚಿನ್ನ ಮತ್ತು ವಜ್ರಾಭರಣವನ್ನು ಬಾಂಬೆ ಮಾರುಕಟ್ಟೆಯಲ್ಲಿ ಮಾರಿ ಹಣ ಹೊಂದಿಸಿಕೊಟ್ಟರು. ಕೆಆರ್ ಎಸ್ ಜಲಾಶಯದ ನೀರು ಇಂದಿಗೂ ಮಂಡ್ಯ, ಮೈಸೂರು, ಬೆಂಗಳೂರು ಜನರಿಗೆ ಎಷ್ಟು ಉಪಯೋಗವಾಗುತ್ತಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

-ಗ್ರಾಮಾಂತರ ಪ್ರದೇಶಗಳಲ್ಲಿ ಶ್ರೀಮಂತರಿಂದ ಕಟ್ಟಗಳನ್ನು ದಾನವಾಗಿ ಪಡೆದು ಅವರ ಕುಟುಂಬದ ಹೆಸರಿನಲ್ಲಿ ಆರೋಗ್ಯ ಕೇಂದ್ರ, ಪಶುವೈದ್ಯಕೀಯ ಕೇಂದ್ರಗಳನ್ನು ಆರಂಭಿಸಿರು. ಇದರಿಂದ ಸಾಮಾನ್ಯ ಜನರಿಗೆ ಇಂದಿಗೂ ಅನುಕೂಲವಾಗಿದೆ.

-ಇಂದು ನಡೆಯುವ ಶಾಸಕಾಂಗ ಸಭೆಯ ರೂವಾರಿ ನಾಲ್ವಡಿ ಕೃಷ್ಣರಾಜ ಒಡೆಯರ್. 1907 ರಲ್ಲಿ ಮೊದಲ ಬಾರಿಗೆ ಪ್ರಜಾಪ್ರತಿನಿಧಿಗಳ ಸಭೆಯನ್ನು ಮೈಸೂರಿನ ಜಗನ್ಮೋಹನ ಪ್ಯಾಲೇಸ್ ನಲ್ಲಿ ಆರಂಭಿಸಿದರು.

-ಮೊದಲ ಬಾರಿಗೆ ದಲಿತರಿಗೆ ಮತ್ತು ಹಿಂದುಳಿದ ವರ್ಗದವರಿಗೆ ಮೀಸಲಾತಿ ವ್ಯವಸ್ಥೆಯನ್ನು ತಂದವರು ಅವರು. ತಮ್ಮ ಸಂಸ್ಥಾನಕ್ಕೆ ಹಿಂದುಳಿದ ವರ್ಗದ ದಿವಾನರನ್ನು ನೇಮಿಸಿದವರು.

-1916 ರಲ್ಲಿ ಕನ್ನಡ ನಾಡಿನಲ್ಲಿ ಮೊದಲು ವಿಶ್ವವಿದ್ಯಾಲಯವನ್ನು ತೆರೆದರು.

-ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆಗೆ ಕಾರಣ ಕರ್ತರಾದವರು.

-ಈಗಿನ ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ, ಭದ್ರಾವತಿಯ ಕಬ್ಬಿಣ, ಉಕ್ಕಿನ ಕಾರ್ಖಾನೆ ಆರಂಭಗೊಂಡಿದ್ದೇ ನಾಲ್ವಡಿಯವರ ಕಾಲದಲ್ಲಿ.

-ಇಂದಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಗೆ ನಾಲ್ಕು ಎಕರೆ ಜಮೀನನ್ನು ಉಚಿತವಾಗಿ ನೀಡಿದವರೇ ಅವರು.

ಇಂಥಾ ನಾಲ್ವಡಿಯವರ ಕೊಡುಗೆಗಳನ್ನು ಸ್ಮರಿಸಿಕೊಂಡು ಇಂದಿಗೂ ಜನ ಬದುಕುತ್ತಿದ್ದಾರೆ. ಈ ಮೇಲೆ ಹೇಳಿದವು ಕೇವಲ ಪ್ರಮುಖ ಕೊಡುಗೆಗಳಷ್ಟೇ. ಇನ್ನೂ ಅನೇಕ ಕೊಡುಗೆಗಳ ಮೂಲಕ ಅವರು ನಾಡ ಜನರ ಪ್ರೀತಿಗೆ ಪಾತ್ರರಾದವರು. ಅವರ ಸಾಧನೆಗಳ ಸಮೀಪವೂ ಇಂದಿನ ರಾಜಕಾರಣಿಗಳು ಬರಲು ಸಾಧ್ಯವಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ