ಏಪ್ರಿಲ್ ನಿಂದ ನಂದಿನಿ ಹಾಲಿನ ದರ ಎಷ್ಟಾಗುತ್ತದೆ ನೋಡಿ

ಶನಿವಾರ, 25 ಮಾರ್ಚ್ 2017 (09:09 IST)
ಬೆಂಗಳೂರು: ರೈತರಿಗೆ ನೆರವಾಗುವ ದೃಷ್ಟಿಯಿಂದ ನಂದಿನಿ ಹಾಲು ಗ್ರಾಹಕರಿಗೆ ಬರೆ ಹಾಕಲು ಸರ್ಕಾರ ತೀರ್ಮಾನಿಸಿದೆ. ಹೀಗಾಗಿ ಏಪ್ರಿಲ್ ನಿಂದ ನಂದಿನಿ ಹಾಲಿನ ದರದಲ್ಲಿ ಏರಿಕೆಯಾಗಲಿದೆ.

 

ಮುಂದಿನ ತಿಂಗಳಿನಿಂದ ಪ್ರತಿ ಲೀ. ಗೆ 2 ರೂ. ಹೆಚ್ಚಳವಾಗಲಿದ್ದು, ಪ್ರತೀ ಲೀಟರ್ ಗೆ 33 ರೂ. ಇದ್ದ ಹಾಲಿನ ದರ 35 ರೂ. ಗೆ ಏರಿಕೆಯಾಗಲಿದೆ. ಕಳೆದ ವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಶು ಸಂಗೋಪನಾ ಸಚಿವ ಎ. ಮಂಜು ಈ ಬಗ್ಗೆ ಸುಳಿವು ನೀಡಿದ್ದರು.

ಆದರೆ ಕೆಎಂಎಫ್ ದರ ಹೆಚ್ಚಳ ಬಗ್ಗೆ ಸರ್ಕಾರವೇ ತೀರ್ಮಾನ ಕೈಗೊಳ್ಳಲಿದೆ ಎಂದಿದ್ದಾರೆ. ಹಾಗಿದ್ದರೂ ಬೇರೆ ರಾಜ್ಯಗಳ ಹಾಲಿನ ದರಕ್ಕೆ ಹೋಲಿಸಿದರೆ ನಂದಿನಿ ಅಗ್ಗದ ಬೆಲೆಗೆ ಹಾಲು ಒದಗಿಸುತ್ತಿದೆ. ಆದರೆ ಈಗ ಹಾಲಿನ  ದರ ಹೆಚ್ಚಿಸಿದರೆ,  ಹಾಲಿನ ಉಳಿದ ಉತ್ಪನ್ನಗಳ ದರ ಹೆಚ್ಚಳವಾಗುವ ಸಾಧ್ಯತೆ ಇಲ್ಲದಿಲ್ಲ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ