ಪ್ರಶ್ನೆಪತ್ರಿಕೆ ಲೀಕ್ ಮಾಡುವವರಿಗೆ 5 ವರ್ಷ ಜೈಲು ಮತ್ತು 5 ಲಕ್ಷ ರೂಪಾಯಿ ದಂಡ ಪರೀಕ್ಷಾ ಅಕ್ರಮ ಎಸಗಿದ ವಿದ್ಯಾರ್ಥಿಗೆ 3 ವರ್ಷ ಡಿಬಾರ್ ಸೇರಿದಂತೆ ಅನೇಕ ಕಠಿಣ ಕ್ರಮಗಳನ್ನೊಳಗೊಂಡ ಕರ್ನಾಟಕ ಶಿಕ್ಷಣ ತಿದ್ದುಪಡಿ ವಿಧೇಯಕಕ್ಕೆ ನಿನ್ನೆ ವಿಧಾನಸಭೆಯಲ್ಲಿ ಅನುಮೋದನೆ ಸಿಕ್ಕಿದೆ.
ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳನ್ನ ತಡೆಯಲು ಸರ್ಕಾರ ಇಂತಹ ಕಠಿಣ ತಿದ್ದುಪಡಿಮಾಡಿದೆ. ಶಿಕ್ಷಣ ಸಚಿವ ತನ್ವೀರ್ ಸೇಠ್ ಈ ತಿದ್ದುಪಡಿ ವಿಧೇಯಕವನ್ನ ಮಂಡಿಸಿದರು.
ಪರೀಕ್ಷಾ ಕೇಂದ್ರಗಳಲ್ಲೇ ಪ್ರಶ್ನೆಪತ್ರಿಕೆ ಮುದ್ರಣ, ಪ್ರಶ್ನೆಪತ್ರಿಕೆಗಳಿಗೆ ಬ್ಯಾಂಕ್ ಲಾಕರ್ ಬಳಕೆ, ಸಿಸಿಟಿವಿ ಅಳವಡಿಕೆ ಸೇರಿದಂತೆ ಹತ್ತು ಹಲವು ಭದ್ರತಾ ಕ್ರಮಗಳನ್ನ ವಿಧೇಯಕ ಒಳಗೊಂಡಿದೆ.