ರಾಯಪುರ ಅಧಿವೇಶನ ‘ಕೈ’ಗೆ ಹೊಸ ದಿಕ್ಕು - ಡಿಕೆಶಿ ವ್ಯಂಗ್ಯ

ಸೋಮವಾರ, 27 ಫೆಬ್ರವರಿ 2023 (17:38 IST)
ಛತ್ತೀಸ್‌ಗಡದ ರಾಯಪುರದಲ್ಲಿ ನಡೆದ ಅಧಿವೇಶನ ಕಾಂಗ್ರೆಸ್‌ಗೆ ಹೊಸ ದಿಕ್ಕು ಸಿಕ್ಕಂತಾಗಿದೆ ಎಂದು KPCC ಅಧ್ಯಕ್ಷ D.K. ಶಿವಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿಂದು ಮಾತನಾಡಿದ ಡಿಕೆಶಿ, ರಾಯಪುರ ಅಧಿವೇಶನ ಹೊಸ ದಿಕ್ಕು ಕೊಡ್ತಾ ಇದೆ. ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಹೇಗೆ ಹೋಗಬೇಕು ಎಂದು ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು. 2024ರ ಚುನಾವಣೆಗೆ ಹೇಗೆ ತಯಾರಿ ಆಗಬೇಕು? ಭಾರತ ಜೋಡೋ ವೇಳೆ ತೆಗೆದುಕೊಂಡ ತೀರ್ಮಾನ ಅನುಷ್ಠಾನ ಮಾಡುವುದು ಹೇಗೆ ಎಂಬ ವಿಚಾರಗಳು ರಾಯಪುರದ ಅಧಿವೇಶದಲ್ಲಿ ಚರ್ಚೆ ಆಗಿವೆ ಎಂದು ಮಾಹಿತಿ ನೀಡಿದರು. ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಆಡಳಿತ ಮಾಡುವುದು ನಾವು. ಹಾಗಾಗಿ ನಾವು ಪ್ರಚಾರಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಬಂದು ಆಡಳಿತ ಮಾಡಲ್ಲ. ಮೋದಿ, ಅಮಿತ್‌ ಶಾ ಪಂಚಾಯಿತಿ, ತಾಲೂಕು, ಜಿಲ್ಲೆ ಪ್ರಚಾರಕ್ಕೆ ಬಂದು ಹೋಗಲಿ ಎಂದು ತಿರುಗೇಟು ನೀಡಿದರು. ರಾಜ್ಯಕ್ಕೆ ಬಿಜೆಪಿ ನಾಯಕರ ನಿರಂತರ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಡಬಲ್ ಇಂಜಿನ್ ಇದೆ, ಎಲ್ಲಿ ಬೇಕಾದ್ರು ಗಾಡಿ ಓಡಿಸಲಿ ಎಂದು ಪದೇ ಪದೆ ಮೋದಿ, ಅಮಿತ್ ಶಾ‌ ರಾಜ್ಯಕ್ಕೆ ಬರ್ತಾ ಇರೋದಕ್ಕೆ ಡಿಕೆಶಿ ವ್ಯಂಗ್ಯವಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ