ಬೆಂಗಳೂರು : ಸಾರ್ವಜನಿಕರಿಗೆ ತೊಂದರೆಯಾಗುವ ಹಿನ್ನಲೆಯಲ್ಲಿ ಇದೀಗ ನೂತನ ಬಿಜೆಪಿ ಸರ್ಕಾರದಗೃಹಮಂತ್ರಿ ಬಸವರಾಜ ಬೊಮ್ಮಾಯಿ ತಮಗೆ ಝೀರೋ ಟ್ರಾಫಿಕ್ ಸೌಲಭ್ಯ ಬೇಡವೆಂದು ಹೇಳಿ ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿಗಳಿಗೆ, ಸಚಿವರಿಗೆ ಝೀರೋ ಟ್ರಾಫಿಕ್ ಸೌಲಭ್ಯ ಒದಗಿಸಲಾಗುತ್ತದೆ. ಆದರೆ ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿರುವ ಕಾರಣ ಡಿಸಿಎಂ ಅಶ್ವಥ್ ನಾರಾಯಣ ಕೂಡ ತಮಗೆ ಝೀರೋ ಟ್ರಾಫಿಕ್ ಸೌಲಭ್ಯ ಬೇಡವೆಂದು ಹೇಳಿದ್ದರು.
ಇದೀಗ ಬಿಜೆಪಿ ಸರ್ಕಾರದ ಗೃಹಮಂತ್ರಿ ಬಸವರಾಜ ಬೊಮ್ಮಾಯಿ, ‘ಪೊಲೀಸ್ ಇಲಾಖೆ ನನಗೆ ನೀಡಿದ ಝೀರೋ ಟ್ರಾಫಿಕ್ನಿಂದ ಸಾಮಾನ್ಯ ಜನರಿಗೆ ತೊಂದರೆಗಳಾಗಿದ್ದು ಕಂಡುಬಂದಿದೆ. ಈ ಕುರಿತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ನಾನು ಹೋಗುವ ಮಾರ್ಗದಲ್ಲಿ ಇನ್ನುಮುಂದೆ ಝೀರೋ ಟ್ರಾಫಿಕ್ ನೀಡಬೇಡಿ ಹಾಗೂ ಪ್ರತಿಬಾರಿ ಭೇಟಿ ನೀಡಿದಾಗ ಇಲಾಖೆಯಿಂದ ನೀಡುವ ಗಾರ್ಡ್ ಆಫ್ ಹಾನರ್ ಬೇಡವೆಂದು ಸೂಚಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.