ನೆರೆ ಸಂತ್ರಸ್ತರಿಗೆ ನೂತನ ಮನೆ ಭಾಗ್ಯ : ಜೆಡಿಎಸ್ ಪ್ರತಿಭಟನೆ

ಗುರುವಾರ, 4 ಜೂನ್ 2020 (18:08 IST)
2018 ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡಿದ್ದವರಿಗೆ ಸರಕಾರ ಮನೆ ಭಾಗ್ಯ ಕರುಣಿಸಿದೆ.  

ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ಸರ್ಕಾರದ ವತಿಯಿಂದ ನಿಮಿ೯ಸಲಾದ ನೂತನ ಮನೆಗಳನ್ನು ಹಸ್ತಾಂತರಿಸಲಾಗಿದೆ.

ಮಡಿಕೇರಿ ಬಳಿಯ ಜಂಬೂರು ಮತ್ತು ಮದೆ ಗ್ರಾಮದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ನಿಮಿ೯ಸಲಾದ 463 ಮನೆಗಳಳ ಹಕ್ಕು ಪತ್ರ , ಕೀ ಗಳನ್ನು ಫಲಾನುಭವಿಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯ ವಸತಿ ಸಚಿವ ವಿ.ಸೋಮಣ್ಣ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಸಂತ್ರಸ್ತರಿಗೆ ಹಸ್ತಾಂತರಿಸಿದರು.

ಮನೆಗಳನ್ನು ನಿಮಿ೯ಸಲಾದ ಬಡಾವಣೆಗೆ ಫೀಲ್ಡ್ ಮಾಷ೯ಲ್ ಕೆ.ಎಂ.ಕಾಯ೯ಪ್ಪ ಬಡಾವಣೆ ಎಂದು ಹೆಸರಿಡಲಾಗಿದೆ. ಪ್ರತಿ ಮನೆಯೂ 9.85 ಲಕ್ಷ ರೂಪಾಯಿ ವೆಚ್ಚದಲ್ಲಿ ನಿಮಾ೯ಣವಾಗಿದ್ದು, 2 ಬೆಡ್ ರೂಮ್ ಗಳನ್ನು ಹೊಂದಿದೆ.

2018 ರಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಪ್ರಯತ್ನದಿಂದಾಗಿಯೇ ಈ ಮನೆಗಳು ನಿಮಾ೯ಣಗೊಂಡಿದ್ದರೂ ಸೌಜನ್ಯಕ್ಕೂ ಕುಮಾರಸ್ವಾಮಿಯವರನ್ನು ಕಾಯ೯ಕ್ರಮಕ್ಕೆ ಆಹ್ವಾನಿಸಲಿಲ್ಲ ಎಂದು ಜೆಡಿಎಸ್ ಕಾಯ೯ಕತ೯ರು ಪ್ರತಿಭಟನೆ ನಡೆಸಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ