ಸಂಪುಟಕ್ಕೆ ನೂತನ ಸಚಿವರು : ಆಯ್ಕೆ ಸೀಕ್ರೇಟ್ ಹೇಳಿದ ವಿಜಯೇಂದ್ರ
ಗುರುವಾರ, 29 ಜುಲೈ 2021 (09:39 IST)
ಬೆಂಗಳೂರು(ಜು.29): ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ಪಕ್ಷದ ಹೈ ಕಮಾಂಡ್ ಆಯ್ಕೆ ಮಾಡಿದ್ದು ನಾನು ಸೂಪರ್ ಸಿಎಂ ಟ್ಯಾಗ್ನಿಂದ ಹೊರಬಂದಿದ್ದೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ತಿಳಿಸಿದ್ದಾರೆ.
• ನಾನು ಸೂಪರ್ ಸಿಎಂ ಟ್ಯಾಗ್ನಿಂದ ಹೊರಬಂದಿದ್ದೇನೆ
• ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೇಳಿಕೆ
•ಬೊಮ್ಮಾಯಿ ಅವರು ನುರಿತ ರಾಜಕಾರಣಿ, ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಬೊಮ್ಮಾಯಿ ಅವರು ನುರಿತ ರಾಜಕಾರಣಿ, ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರದೇ ಅದ ಕೊಡುಗೆ ನೀಡಿರುವುದನ್ನು ಗಮನಿಸಿದ ಹೈ ಕಮಾಂಡ್ ಸಿಎಂ ಮಾಡಿದೆ.
ಯಡಿಯೂರಪ್ಪ ನಿವಾಸ ಕೇಂದ್ರೀಕೃತವಾಗಿರಲಿದೆ ಎಂಬುದೆಲ್ಲಾ ಸುಳ್ಳು ಅದಕ್ಕೆಲ್ಲಾ ಕಿವಿಗೊಡಬಾರದು ಎಂದು ತಿಳಿಸಿದರು.
ಬಿಜೆಪಿಗೆ ವಲಸೆ ಬಂದವರು ಯಡಿಯೂರಪ್ಪ ಬಿಜೆಪಿಯನ್ನು ನಂಬಿ ಬಂದಿದ್ದಾರೆ. ಅವರನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತದೆ. ಸಂಪುಟದಲ್ಲಿ ಯುವಕರಿಗೆ ಆದ್ಯತೆ ಸಿಗುವ ಸಾಧ್ಯತೆ ಇದೆ ಎಂದು ಹೇಳಿದರು