ಉಗ್ರರಿಗೆ ನೆರವಾಗುತ್ತಿದ್ದ ಎಎಸ್ಐ ಚಾಂದ್ ಪಾಷಾನನ್ನು ಅರೆಸ್ಟ್ ಮಾಡಿದ ಎನ್ಐಎ

Krishnaveni K

ಬುಧವಾರ, 9 ಜುಲೈ 2025 (11:53 IST)
Photo Credit: X
ಬೆಂಗಳೂರು: ಉಗ್ರರಿಗೆ ನೆರವು ನೀಡುತ್ತಿದ್ದ ಆರೋಪದ ಹಿನ್ನಲೆಯಲ್ಲಿ ಮೂವರನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ವಿಪರ್ಯಾಸವೆಂದರೆ ಇದರಲ್ಲಿ ಜನರಿಗೆ ರಕ್ಷಣೆ ಒದಗಿಸಬೇಕಾಗಿದ್ದ ಪೊಲೀಸ್ ಅಧಿಕಾರಿ ಚಾಂದ್ ಪಾಷಾ ಕೂಡಾ ಒಬ್ಬರಾಗಿದ್ದಾರೆ.

ಪರಪ್ಪನ ಅಗ್ರಹಾರದ ಎಎಸ್ಐ ಚಾಂದ್ ಪಾಷಾ ಬಂಧಿತ. ಈತನ ಜೊತೆಗೆ ಪರಪ್ಪನ ಅಗ್ರಹಾರದಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ನಾಗರಾಜ್ ಮತ್ತೊಬ್ಬ ಬಂಧಿತ. ಇನ್ನೋರ್ವ ಆರೋಪಿ ಜುನೈದ್ ತಲೆಮರೆಸಿಕೊಂಡಿದ್ದು ಆತನ ತಾಯಿಯನ್ನು ಆನಿಸ್ ಫಾತಿಮಾಳನ್ನು ಬಂಧಿಸಲಾಗಿದೆ.

ಬೆಂಗಳೂರು, ಕೋಲಾರ ಸೇರಿದಂತೆ ಐದು ಕಡೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಪರಪ್ಪನ ಅಗ್ರಹಾರದಿಂದ ಎರಡು ವಾಕಿಟಾಕಿಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದ ಪ್ರಸಂಗ ಇದಾಗಿದೆ.

ಇಂತಹ ಪೊಲೀಸ್ ಅಧಿಕಾರಿಯಿರುವ ಜೈಲಿನಲ್ಲಿ ಎಷ್ಟರಮಟ್ಟಿಗೆ ಭದ್ರತೆ, ಶಿಕ್ಷೆ ನಿರೀಕ್ಷಿಸಲು ಸಾಧ್ಯ ನೀವೇ ಊಹಿಸಿ. ಇದೀಗ ಎನ್ಐಎ ಅಧಿಕಾರಿಗಳು ಇವರನ್ನು ವಿಚಾರಣೆಗೊಳಪಡಿಸುತ್ತಿದ್ದು ಮತ್ತಷ್ಟು ಸ್ಪೋಟಕ  ವಿಚಾರಗಳು ಹೊರಬೀಳುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ