ಮೊಹಮ್ಮದ್ ನಲಪಾಡ್ ಗೆ ಕರುಣೆ ತೋರದ ನ್ಯಾಯಾಲಯ
ಇದರಿಂದಾಗಿ ಮೊಹಮ್ಮದ್ ನಲಪಾಡ್ ಗೆ ಜಾಮೀನು ನಿರಾಕರಣೆಯಾಗಿದೆ. ರೆಸ್ಟೋರೆಂಟ್ ನಲ್ಲಿ ಹಲ್ಲೆ ನಡೆಸಿದ್ದಲ್ಲದೆ, ಆಸ್ಪತ್ರೆಗೂ ತೆರಳಿ ಹಲ್ಲೆ ನಡೆಸಿದ್ದಕ್ಕೆ ನಲಪಾಡ್ ಗೆ ಜಾಮೀನು ನಿರಾಕರಿಸಲಾಗಿದೆ.
ಅಲ್ಲದೆ, ಹಲ್ಲೆಗೊಳಗಾದ ವಿದ್ವತ್ ಸ್ಥಿತಿ ತೀರಾ ಗಂಭೀರವಾಗಿದ್ದರಿಂದ ಇದೊಂದು ಗಂಭೀರ ಪ್ರಕರಣ ಎಂದು ಪರಿಗಣಿಸಿದ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಹೀಗಾಗಿ ಇದೀಗ ಮೊಹಮ್ಮದ್ ನಲಪಾಡ್, ಜಾಮೀನು ಕೋರಿ ಹೈ ಕೋರ್ಟ್ ಮೆಟ್ಟಿಲೇರಬೇಕಾಗಿದೆ.