ನೆಲ-ಜಲ, ಗಡಿ, ಭಾಷೆಯಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ: ಸಿಎಂ ಖಡಕ್ ನುಡಿ

ಗುರುವಾರ, 15 ಸೆಪ್ಟಂಬರ್ 2016 (16:59 IST)
ನೆಲ-ಜಲ, ಗಡಿ ಹಾಗೂ ಭಾಷೆಯ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
 
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಜಲ ವಿವಾದಕ್ಕೆ 124 ವರ್ಷದ ಇತಿಹಾಸವಿದ್ದು, ವಿವಾದಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 25 ರಂದು ಬಲವಾಗಿ ವಾದ ಮಂಡಿಸುತ್ತೇವೆ ಎಂದು ಹೇಳಿದರು.
 
ಕಾವೇರಿ ವಿಚಾರದಲ್ಲಿ ರಾಜ್ಯದ ವಿರುದ್ಧ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ರಾಜ್ಯದ ವಿರುದ್ಧ ತೀರ್ಪು ಬಂದಿದೆ. ಎಲ್ಲ ರಾಜಕೀಯ ಪಕ್ಷಗಳ ಅಧಿಕಾರದ ಅವಧಿಯಲ್ಲೂ ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಹರಿಸಲಾಗಿದೆ ಎಂದು ಹೇಳಿದರು.
 
ಸರ್‌.ಎಂ.ವಿಶ್ವೇಶ್ವರಯ್ಯರನ್ನು ಹೊಗಳಿದ ಸಿಎಂ....
 
ಸರ್‌.ಎಂ.ವಿಶ್ವೇಶ್ವರಯ್ಯನವರ ಜನ್ಮದಿನಕ್ಕೆ ಶುಭಾಶಯ ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಶ್ವೇಶ್ವರಯ್ಯನವರನ್ನು ಮೇಧಾವಿ ಇಂಜನಿಯರ್ ಎಂದು ಹೊಗಳುವ ಮೂಲಕ ದೇಶದ ಇತರೆ ಇಂಜನಿಯರ್‌ಗಳು ಅವರ ಹಾದಿಯಲಿ ಸಾಗಲಿ ಎಂದು ಕಿವಿಮಾತು ಹೇಳಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ