ನಾಳೆ ಬಲವಂತದ ಬಂದ್ ಮಾಡಿಸಿದ್ರೆ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿಪಿ ಅನುಚೇತ್ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಇಎಸ್ ಸಂಘಟನೆ ನಿಷೇಧಿ ಸುವಂತೆ ಒತ್ತಾಯಿಸಿ ನಾಳೆ ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದು, ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗಲಿದೆ.ಹಾಗಾಗಿ ಬಂದ್ ಕೈಬಿಡಬೇಕು. ಬಲವಂತದ ಬಂದ್ ಮಾಡಿದ್ರೆ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಹಾಗೂ ಟೌನ್ ಹಾಲ್ ಬಳಿಯೇ ಬಂಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ಹೊಸ ವರ್ಷ ಆಚರಿಸಲು ಯಾವುದೆ ರೀತಿಯ ಕಾರ್ಯಕ್ರಮ, ಡಿಜೆ ,ಇತ್ಯಾದಿ ಪಾರ್ಟಿಗಳನ್ನು ಆಯೋಜಿಸುವಂತಿಲ್ಲ. ಯಾವುದಾದರು ಕಾರ್ಯಕ್ರಮ ಆಯೋಜಿಸಿದರ ಬಗ್ಗೆ ತಿಳಿದು ಬಂದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತೆ. ಅಲ್ಲದೇ ಅಂತವರ ಮೇಲೆ ಕೇಸ್ ದಾ