ನಾಯಕತ್ವ ಬದಲಾವಣೆ ಇಲ್ಲ : ಬಿಎಸ್‍ವೈ
ಜಿಲ್ಲೆಯ ಶಿಕಾರಿಪುರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನನಗೆ ಇರುವ ಮಾಹಿತಿ ಪ್ರಕಾರ ನಾಯಕತ್ವ ಬದಲಾವಣೆ ಇಲ್ಲ. ಇನ್ನು ಈ ಬಾರಿ ಕೆಲವು ಹಾಲಿ ಶಾಸಕರಿಗೆ ಟಿಕೆಟ್ ಇಲ್ಲ ಎನ್ನುವ ವಿಚಾರ ನನಗೆ ಗೊತ್ತಿಲ್ಲ. ಈ ಬಗ್ಗೆ ನಾನು ಸಹ ಚರ್ಚೆ ಮಾಡಲು ಹೋಗುವುದಿಲ್ಲ.
ಅದೆಲ್ಲಾ ಕೇಂದ್ರದ ನಾಯಕರಿಗೆ ಬಿಟ್ಟಂತಹ ವಿಷಯ ಎಂದರು. ರಾಜ್ಯದ ರಾಜಕೀಯ ಪರಿಸ್ಥಿತಿ ಅವಲೋಕಿಸುವ ಸಲುವಾಗಿ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.
ಚುನಾವಣೆ ವರ್ಷ ಆಗಿರುವುದರಿಂದ ಇನ್ನು ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ರಾಜ್ಯಕ್ಕೆ ಹೆಚ್ಚು ಗಮನ ಕೊಡಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.