ಕೊರೊನಾ ವೈರಸ್ ತಡೆಗೆ ಮಾಸ್ಕ್‌ ಬೇಡ ಎಂದ ಸಚಿವ

ಸೋಮವಾರ, 9 ಮಾರ್ಚ್ 2020 (18:42 IST)
‘ಕೋವಿಡ್‌–19 ಬಗ್ಗೆ ರಾಜ್ಯದೆಲ್ಲೆಡೆ ತೀವ್ರ ನಿಗಾ ವಹಿಸಲಾಗಿದೆ. ಜನರು ಎನ್‌–95 ಮಾಸ್ಕ್‌ಗಳನ್ನು ಉಪಯೋಗಿಸುವ ಅಗತ್ಯ ಇಲ್ಲ, ಜನರು ಆತಂಕಪಡಬೇಕಾಗಿಲ್ಲ’.

ಹೀಗಂತ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌  ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜ್ವರ, ಶೀತ, ಕೆಮ್ಮು ಇದ್ದವರು ವೈರಸ್‌ ಇತರರಿಗೆ ಹರಡದಂತೆ ಮುಖಗವಸು ಉಪಯೋಗಿಸಬಹುದು.

ಆದರೆ ಎಲ್ಲಾ ಜ್ವರವನ್ನು ಕೊವಿಡ್‌–19 ಎಂದು ಹೇಳುವುದು ತಪ್ಪು. ಮಾಸ್ಕ್‌ ಖರೀದಿಸಲು ಮೆಡಿಕಲ್‌ ಶಾಪ್‌ ಮುಂದೆ ಸಾಲುಗಟ್ಟಿ ಹೋಗುವುದು ಬೇಡ. ರಾಜ್ಯದಲ್ಲಿ ಒಂದು ಪ್ರಕರಣ ಪತ್ತೆಯಾಗಿದ್ದರೂ ಆತಂಕಪಡುವ ಸ್ಥಿತಿ ಇಲ್ಲ’ಎಂದು ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ