ವೆಹಿಕಲ್ ನಂಬರ್ ಪ್ಲೇಟ್ ಮೇಲೆ ಹೆಸರು ಬರೆದರೆ ಬೀಳುತ್ತೆ ದುಬಾರಿ ಫೈನ್!
ವಾಹನಗಳ ಐಡೆಂಫಿಕೇಶನ್‌ಗಾಗಿ ನಂಬರ್ ಪ್ಲೇಟ್ ನೀಡಲಾಗುತ್ತೆ. ಆದರೆ, ಕೆಲವರು ಶೋಕಿಗಾಗಿ ಇದರ ಮೇಲೆ ಹೆಸ್ರು ಬರೆಯೋದು. ಡಿಸೈನ್ ಬಿಡಿಸಿಕೊಳೋದು ಮಾಡ್ತಿದ್ದಾರೆ. ಇಂತಹ ಶೋಕಿಗಳಿಗೆ ಬ್ರೇಕ್ ಹಾಕೋಕೆ ಸಾರಿಗೆ ಇಲಾಖೆ ಮುಂದಾಗಿದೆ.
ಹೌದು, ನಂಬರ್ ಪ್ಲೇಟ್ ಮೇಲೆ ಇರುವ ಹೆಸರು ಚಿಹ್ನೆ ತೆರವುಗೊಳಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಈಗಾಗಲೇ ಕಟ್ಟುನಿಟ್ಟಾಗಿ ಆದೇಶ ಹೊರಡಿಸಿದ್ದಾರೆ. ಆದರೆ, ಬಹುತೇಕ ಮಂದಿ ನಂಬರ್ ಪ್ಲೇಟ್ ಮೇಲೆ ಇರುವ ಹೆಸರು ಚಿಹ್ನೆ ಲಾಂಛನ ತೆರವು ಮಾಡಿಲ್ಲ. ಹೀಗಾಗಿ ನಗರದೆಲ್ಲೆಡೆ ಸಾರಿಗೆ ಇಲಾಖೆಗೆ ಫೀಲ್ಡ್ಗಿಳಿದು ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದೆ.
ನೋಂದಣಿ ಫಲಕದ ಮೇಲೆ ಅನಧಿಕೃತವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗ ಇತ್ಯಾದಿ ಲಾಂಛನಗಳನ್ನ ಹಾಕೋದು ಸಂಚಾರಿ ನಿಯಮದ ಉಲ್ಲಂಘನೆಯಾಗಲಿದೆ. ಆದ್ರೂ, ಜನ ಬೇಕಾಬಿಟ್ಟಿ ಶೋಕಿಗೆ ನಂಬರ್ ಪ್ಲೇಟನ್ನು ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರದ ಸೂಚನೆಯಂತೆ ಸಾರಿಗೆ ಇಲಾಖೆ ಕಾರ್ಯಾಚರಣೆ ಮಾಡಲು ಮುಂದಾಗಿದೆ.