ಪ್ಲಾಸ್ಟಿಕ್ ಆಹಾರ ಎನ್ನುವುದೆಲ್ಲಾ ಸುಳ್ಳು: ಸಚಿವ ಯುಟಿ ಖಾದರ್

ಶುಕ್ರವಾರ, 9 ಜೂನ್ 2017 (12:10 IST)
ಬೆಂಗಳೂರು: ರಾಜ್ಯದ ಕೆಲವು ಕಡೆ ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಮೊಟ್ಟೆ ಸಿಕ್ಕಿದೆ ಎನ್ನುವದೆಲ್ಲಾ ಸುಳ್ಳು. ಅಂತಹ ಯಾವುದೇ ಸಾಧ್ಯತೆಗಳೂ ಇಲ್ಲ ಎಂದು ಆಹಾರ ಮತ್ತು ನಾಗರಿಕ ಸಚಿವ ಯುಟಿ ಖಾದರ್ ಸ್ಪಷ್ಟಪಡಿಸಿದ್ದಾರೆ.

 
ಇದೆಲ್ಲಾ ಮಾನಸಿಕವಷ್ಟೆ. ಅನ್ನ ಭಾಗ್ಯ ಯೋಜನೆ ಅಕ್ಕಿ ಅಥವಾ ಹೊರಗಡೆ ಸಿಗುವ ಪ್ಲಾಸ್ಟಿಕ್ ಆಹಾರ ವಿಚಾರಗಳೆಲ್ಲಾ ಊಹಾಪೋಹಗಳಷ್ಟೇ ಎಂದು ಸಚಿವರು ವಿಪಕ್ಷಗಳಿಗೆ ಸದನದಲ್ಲಿ ಉತ್ತರಿಸಿದರು.

ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತು ಸಿಟಿ ರವಿ ಕಲಾಪದಲ್ಲಿ ಪ್ಲಾಸ್ಟಿಕ್ ಆಹಾರಗಳು ಮಾರುಕಟ್ಟೆಯಲ್ಲಿ ಹರಿದಾಡುತ್ತಿರುವ ಬಗ್ಗೆ ವಿವರಣೆ ಕೇಳಿದಾಗ ಸಚಿವ ಖಾದರ್ ಉತ್ತರ ನೀಡಿದ್ದಾರೆ. ಅಂತಹ ಯಾವುದೇ ಆಹಾರ ವಸ್ತುಗಳು ಕಂಡುಬಂದಲ್ಲಿ ನಮ್ಮ ಗಮನಕ್ಕೆ ತನ್ನಿ. ಎಲ್ಲರೂ ಕುಳಿತು ಚರ್ಚಿಸೋಣ, ಸಮಸ್ಯೆ ಬಗೆ ಹರಿಸೋಣ ಎಂದು ಸಚಿವರು ಹೇಳಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ