ರಾಮನಗರದ ರಾಂಪುರದೊಡ್ಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರ ನಿಯಮಾನುಸಾರವಾಗಿ ಎಂಟು ಭಿನ್ನಮತೀಯ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಈ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಪಕ್ಷದಿಂದ ಉಚ್ಚಾಟನೆಗೊಂಡಿರುವ ಶಾಸಕರು ಶ್ರೀಮಂತರಾಗಿಯೇ ಉಳಿಯಲಿ. ನನ್ನ ಬಳಿ ಬಂದು ಸಾಲಗಾರರಾಗುವುದು ಬೇಡ. ನನ್ನ ಜೊತೆ ಬರುವುದರಿಂದ ಅವರ ಬೀದಿಪಾಲಾಗುವುದು ಬೇಡ ಎಂದು ಹೇಳಿದರು. ಎಂಟು ಶಾಸಕರು ಮಾಡಿರುವ ತಪ್ಪು ಬೇರೆ, ಜಿ.ಟಿ.ದೇವೇಗೌಡ ಮಾಡಿರುವ ತಪ್ಪು ಬೇರೆಯಾಗಿದೆ. ಕೇವಲ ಹಣದ ವ್ಯಾಮೋಹವಿರುವವರು ನನ್ನ ಬಳಿ ಬರುವ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.