'ಧರ್ಮವಸ್ತ್ರಗಳಿಗೆ ಅವಕಾಶ ಇಲ್ಲ'

ಮಂಗಳವಾರ, 19 ಏಪ್ರಿಲ್ 2022 (21:27 IST)
2021-2022 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಏ.22 ರಿಂದ ಆರಂಭವಾಗಲಿದ್ದು ದ್ವಿತೀಯ ಪಿಯುಸಿ ಪರೀಕ್ಷೆಯ ಸಿದ್ದತೆ ಬಗ್ಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಬಿ.ಸಿ ನಾಗೇಶ್, 8 ತಿಂಗಳು ಮಕ್ಕಳನ್ನು ಪರೀಕ್ಷೆಗೆ ರೆಡಿ ಮಾಡಿದ್ದೇವೆ  ಈಗಾಗಲೇ ದಿನಾಂಕ ಘೋಷಣೆ ಆಗಿದೆ. ಏಪ್ರಿಲ್ 22 ರಿಂದ ಮೇ 18 ರವೆರೆಗೆ ಪರೀಕ್ಷೆ ನಡೆಯಲಿದ್ದು ಒಟ್ಟು 6 ಲಕ್ಷ 84 ಸಾವಿರd 255 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ ಎಂದ್ರು. ಇನ್ನು ಸಮವಸ್ತ್ರ ನೀತಿಯನ್ನು ಎಲ್ಲಾ ವಿದ್ಯಾರ್ಥಿಗಳು ಪಾಲಿಸಬೇಕು, ಹಿಜಾಬ್ ಮತ್ತಿತರ ಧಾರ್ಮಿಕತೆ ಬಿಂಬಿಸುವ ವಸ್ತ್ರಗಳಿಗೆ ಅವಕಾಶ ಇಲ್ಲ. ಟೀಚರ್ಸ್ ಹಿಜಾಬ್ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ., ನೈತಿಕವಾಗಿ ಅವರೇ ಅದನ್ನು ತಿಳಿದುಕೊಳ್ಳಬೇಕು ಎಂದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ