ಬೆಂಗಳೂರಿನ ಈ ಪಾರ್ಕ್ ನಲ್ಲಿ ನಡೆಯುವಂತಿಲ್ಲ, ವಾಕಿಂಗ್ ಮಾಡುವಂತಿಲ್ಲ, ಹಾಗಿದ್ದರೆ ಈ ಪಾರ್ಕ್​ನಲ್ಲಿ ಏನು ಮಾಡಬೇಕು?

ಗುರುವಾರ, 14 ಜುಲೈ 2022 (14:46 IST)
ಬೆಂಗಳೂರಿನ ಈ ಪಾರ್ಕ್​ನಲ್ಲಿ ಯಾರೂ ಜಾಗಿಂಗ್, ವಾಕಿಂಗ್ ಮಾಡುವಂತಿಲ್ಲ, ಬಲದಿಂದ ಎಡಕ್ಕೆ ಯಾರೂ ನಡೆಯುವಂತಿಲ್ಲ ಎಂದು ಬಿಬಿಎಂಪಿ ದೊಡ್ಡ ಬೋರ್ಡ್​ ಹಾಕಿದೆ. ಇದರ ಫೋಟೋ ಈಗ ವೈರಲ್ ಆಗಿದೆ.
ಬೆಂಗಳೂರು: ಬೆಂಗಳೂರು ಉದ್ಯಾನನಗರಿ ಎಂಬ ಹೆಗ್ಗಳಿಕೆ ಪಡೆದಿರುವ ನಗರ.
ಪ್ರತಿ ಏರಿಯಾಗೂ ನಾಲ್ಕೈದು ಪಾರ್ಕ್​ಗಳಿರುತ್ತವೆ. ಸಾಮಾನ್ಯವಾಗಿ ಭಾರತದ ಸಾರ್ವಜನಿಕ ಪಾರ್ಕ್​ಗಳಲ್ಲಿ ಜನರಿಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಅವರಿಗಾಗಿ ಸಮಯವನ್ನೂ ನಿಗದಿ ಮಾಡಲಾಗುತ್ತದೆ. ಬೆಳಗಿನ ವೇಳೆ ಜಾಗಿಂಗ್, ವಾಕಿಂಗ್ ಮಾಡುವವರಿಗೆ ಮತ್ತು ಸಂಜೆಯ ವೇಳೆ ವಾಕಿಂಗ್ ಮಾಡುವವರಿಗೆ ಪಾರ್ಕ್​ಗಳ ಗೇಟ್ ಓಪನ್ ಮಾಡಲಾಗುತ್ತದೆ. ಆದರೆ, ಬೆಂಗಳೂರಿನ ಈ ಪಾರ್ಕ್​ನಲ್ಲಿ ಯಾರೂ ಜಾಗಿಂಗ್, ವಾಕಿಂಗ್ ಮಾಡುವಂತಿಲ್ಲ, ಬಲದಿಂದ ಎಡಕ್ಕೆ ಯಾರೂ ನಡೆಯುವಂತಿಲ್ಲ ಎಂದು ಬಿಬಿಎಂಪಿ ದೊಡ್ಡ ಬೋರ್ಡ್​ ಹಾಕಿದೆ. ಇದರ ಫೋಟೋ ಈಗ ವೈರಲ್ ಆಗಿದ್ದು, ಪಾರ್ಕ್​ನಲ್ಲಿ ವಾಕಿಂಗ್ ಮಾಡಬಾರದು ಎಂದಾದರೆ ನಾಗಿಣಿ ಡ್ಯಾನ್ಸ್​ ಮಾಡಬಹುದಾ? ಎಂದು ಲೇವಡಿ ಮಾಡಿದ್ದಾರೆ.
 
ಬೆಂಗಳೂರಿನ ಪಾರ್ಕ್​ನ ಗೇಟ್​​ನಲ್ಲಿ ಹಾಕಿರುವ ಒಂದು ಫಲಕದ ಫೋಟೋ ಈಗ ವೈರಲ್ ಆಗಿದೆ. ಇಲ್ಲಿ ಜನರು ಆ್ಯಂಟಿ ಕ್ಲಾಕ್​ವೈಸ್​ (ಬಲದಿಂದ ಎಡಕ್ಕೆ) ನಡೆಯುವಂತಿಲ್ಲ, ವಾಕಿಂಗ್ ಮಾಡುವಂತಿಲ್ಲ, ಜಾಗಿಂಗ್ ಮಾಡುವಂತಿಲ್ಲ ಎಂದು ಬೋರ್ಡ್​ ಹಾಕಲಾಗಿದೆ. ಹಾಗಿದ್ದರೆ ಈ ಪಾರ್ಕ್​ನಲ್ಲಿ ಏನು ಮಾಡಬೇಕು? ಎಂಬುದು ಸದ್ಯಕ್ಕೆ ನೆಟ್ಟಿಗರ ಪ್ರಶ್ನೆಯಾಗಿದೆ. ಈ ಬೋರ್ಡ್​ ಹಾಕುವ ಮೂಲಕ ಬಿಬಿಎಂಪಿ ಸಾಮಾಜಿಕ ಜಾಲತಾಣ ಬಳಕೆದಾರರ ಲೇವಡಿಗೆ ಗುರಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ