ಬಿವೈ ವಿಜಯೇಂದ್ರ ಜೊತೆ ಆರ್ ಅಶೋಕ್ ಸ್ಥಾನಕ್ಕೂ ಕಂಟಕ

Krishnaveni K

ಮಂಗಳವಾರ, 4 ಫೆಬ್ರವರಿ 2025 (13:50 IST)
ಬೆಂಗಳೂರು: ಬಿಜೆಪಿ ಬಣ ರಾಜಕೀಯ ಈಗ ದೆಹಲಿ ಅಂಗಳಕ್ಕೆ ತಲುಪಿದೆ. ಬಿವೈ ವಿಜಯೇಂದ್ರ ಜೊತೆ ಈಗ ಆರ್ ಅಶೋಕ್ ಸ್ಥಾನಕ್ಕೂ ಕುತ್ತು ಬಂದಿದೆ ಎನ್ನಲಾಗಿದೆ.

ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಬಿಜೆಪಿಯ ಬಂಡಾಯ ಬಣ ಈಗ ಬಿಜೆಪಿ ಹೈಕಮಾಂಡ್ ಜೊತೆ ನಿರಂತರವಾಗಿ ಮಾತುಕತೆ ನಡೆಸುತ್ತಿದೆ. ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಕುಟುಂಬದ ಮುಷ್ಠಿಯಲ್ಲಿ ಬಿಜೆಪಿಯಿದೆ. ಇದು ಬದಲಾಗಬೇಕು, ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಬೇಕು ಎಂದು ಯತ್ನಾಳ್ ಬಣ ಒತ್ತಡ ಹೇರುತ್ತಿದೆ.

ಇದರ ಜೊತೆಗೆ ವಿಪಕ್ಷ ನಾಯಕ ಸ್ಥಾನವನ್ನೂ ಬದಲಾಯಿಸುವಂತೆ ಯತ್ನಾಳ್ ಬಣ ಪಟ್ಟಿ ಕೊಟ್ಟಿದೆ ಎನ್ನಲಾಗಿದೆ. ಹೀಗಾಗಿ ವಿಜಯೇಂದ್ರ ಜೊತೆ ಅಶೋಕ್ ಸ್ಥಾನಕ್ಕೂ ಕುತ್ತು ಬಂದಿದೆ ಎನ್ನಬಹುದು. ಇಂದು ಯತ್ನಾಳ್ ಮತ್ತು ಟೀಂ ದೆಹಲಿಗೆ ತೆರಳಲಿದ್ದು ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ಮತ್ತೆ ಒತ್ತಾಯ ಹೇರಲಿದ್ದಾರೆ.

ಒಂದು ವೇಳೆ ಬಂಡಾಯ ನಾಯಕರ ಮಾತಿಗೆ ಹೈಕಮಾಂಡ್ ಒಪ್ಪಿಗೆ ನೀಡಿದರೆ ರಾಜ್ಯ ಬಿಜೆಪಿ ನಾಯಕತ್ವದಲ್ಲಿ ಸಂಪೂರ್ಣ ಬದಲಾವಣೆಯಾಗಲಿದೆ. ಆದರೆ ಇದರಿಂದ ಯಡಿಯೂರಪ್ಪ ಆಪ್ತರ ಅಸಮಾಧಾನ ಹೆಚ್ಚಲಿದೆ. ಹೀಗಾಗಿ ಹೈಕಮಾಂಡ್ ಈಗ ಎಚ್ಚರಿಕೆ ನಡೆ ಇಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ