ಪ್ರವಾಹ ನಿಲ್ಲಲು ಕೃಷ್ಣೆಗೆ ಮುತ್ತೈದೆಯರಿಂದ ಬಾಗಿನ ಅರ್ಪಣೆ
ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ರಾಜ್ಯದ ಪ್ರದೇಶಗಳಲ್ಲಿ ಭಾರೀ ಪ್ರವಾಹ ಇದೆ. ನೀರಿನ ಪ್ರಮಾಣ ಇಳಿಕೆಯಾಗಲಿ ಅಂತ ಮುತ್ತೈದೆಯರು ಹರಕೆ ತೀರಿಸಿದ್ದಾರೆ.
ಶ್ರಾವಣ ಮಾಸ ಅಂಗವಾಗಿ ಮುತ್ತೈದೆಯರಿಂದ ಹರಕೆ ಸಲ್ಲಿಸಲಾಗಿದೆ. ಕೃಷ್ಣ ನದಿಯ ಅಬ್ಬರ ತಗ್ಗುವಂತೆ ದೇವರ ಮೊರೆ ಹೋಗಿದ್ದಾರೆ ಮುಳುಗಡೆ ಸಂತ್ರಸ್ಥರು.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ತುಂಬಿದ ಕೃಷ್ಣೆಗೆ ಬಾಗಿನ ಅರ್ಪಿಸಿದ್ದಾರೆ ಗ್ರಾಮಸ್ಥರು.
ಮುತ್ತೈದೆಯರಿಂದ ಕೃಷ್ಣ ನದಿಗೆ ಬಾಗಿನ ಅರ್ಪಿಸಿ ಜೀವಗಳನ್ನು ಉಳಿಸುವಂತೆ, ಸಾವು ನೋವು ಸಂಭವಿಸದಂತೆ ಕೃಷ್ಣ ನದಿಗೆ ಮೊರೆಹೋಗಲಾಗಿದೆ.
ಈ ಹಿಂದೆಯೂ ಮಹಾಪೂರ ಬಂದಾಗ ಹರಕೆ ಹೊತ್ತ ಕೆಲದಿನಗಳಲ್ಲಿ ಅಬ್ಬರ ತಗ್ಗಿಸಿತ್ತು ಕೃಷ್ಣಾ ನದಿ.