ಪೊಲೀಸರಿಂದ ಹಳೆ ಅಸ್ತ್ರ ಪ್ರಯೋಗ ..!

ಶುಕ್ರವಾರ, 9 ಡಿಸೆಂಬರ್ 2022 (14:11 IST)
ಚಿತ್ರಗಳಲ್ಲಿ ಮಾತ್ರ ನೋಡ್ತಿದ್ದ ದೃಶ್ಯ ಈಗ ರಿಯಲ್ ಆಗಿ ನೋಡಬಹುದು .ಹಾಗೆ ಅಪರಾಧಿಗಳಿಗೆ  ನೋ ಶೂಟೌಟ್ , ನೋ ಎನ್ ಕೌಂಟರ್  ಮಾಡದೇ ಈಗೋ ಹರ್ಟ್ ಮಾಡುವ ಮೂಲಕ ಆರೋಪಿಗಳಿಗೆ ಮಾರ್ಮಿಕವಾಗಿ ಶಿಕ್ಷೆ ನೀಡಲಾಗ್ತಿದೆ .
 
ಈ ಹಿಂದೆ ಪೊಲೀಸ್ ಠಾಣೆಯ ನಾಲ್ಕು ಗೋಡೆಗಳ ಮಧ್ಯೆ ಆರೋಪಿಗಳ ಈಗೋ ಹರ್ಟ್ ಮಾಡುತ್ತಿದ್ದ ಪೊಲೀಸರು .ದೊಡ್ಡ ದೊಡ್ಡ  ರೌಡಿಗಳಿಗೆ ಮಹಿಳಾ ಸಿಬ್ಬಂಧಿಗಳ ಮುಂದೆ ಕಸ ಗುಡಿಸುವ , ಶೌಚಾಲಯ ಕ್ಲೀನ್ ಮಾಡಿಸುವ ಕೆಲಸ ಮಾಡಿಸುತ್ತಿದ್ದರು .ಇದರಲ್ಲಿ ದುರುದ್ದೇಶವಿರುತ್ತಿರಲಿಲ್ಲ. ಬುದ್ದಿ ಕಲಿಸಲು ಪೊಲೀಸರು ನಡೆಸುತ್ತಿದ್ದ ರೀತಿ .ಆದ್ರೆ ಈಗ ಮತ್ತೊಂದು ರೀತಿಯಲ್ಲಿ 'ಬುದ್ದಿ' ಕಲಿಸುವ ಅಸ್ತ್ರ ಪ್ರಯೋಗ ಮಾಡಿದ್ದಾರೆ.
 
ಅಮಾಯಕ ಜನರಿಗೆ  ಬೆದರಿಸಿ, ಹಣ ವಸೂಲಿ ಮಾಡ್ತಿದ್ದ ಆರೋಪಿಗೆ ಮೆರವಣಿಗೆ ಮಾಡುವ ಮೂಲಕ ಶಿಕ್ಷೆ  ನೀಡಲು ಮುಂದಾಗಿದ್ದಾರೆ.ಅಮಾಯಕರ ಮುಂದೆಯೇ ಬೇಡಿ ಹಾಕಿ ಪೊಲೀಸರು ಮೆರವಣಿಗೆ ಮಾಡಿಸಿದಾರೆ.ಸುಹೇಲ್@ ಪಪ್ಪಾಯ ಸುಹೇಲ್ ಎಂಬಾತನನ್ನ ಪೊಲೀಸರು ಗಲ್ಲಿ ಗಲ್ಲಿಯಲ್ಲಿ ಮೆರವಣಿಗೆ ಮಾಡಿದಾರೆ. ಸುಹೇಲ್ ಮೇಲೆ 15 ಪ್ರಕರಣಗಳಿವೆ .ಕೊಲೆ ಯತ್ನ , ವ್ಯಾಪಾರಿಗಳಿಗೆ ಬೆದರಿಕೆ ಸೇರಿ 15 ಪ್ರಕರಣಗಳು ಈತನ ಮೇಲಿದೆ .ಇತ್ತೀಚೆಗೆ ಡ್ರಗ್ ಕೇಸಲ್ಲೂ ಸಿಕ್ಕಿ ಬಿದ್ದಿದ್ದ.ನಟೋರಿಯಸ್ ಅಫೆಂಡರ್ ಆಗಿರುವ ಸುಹೇಲ್ ಗೆ ರೌಡಿ ಶೀಟರ್ ಹಾಕಲು ಸಿದ್ಧತೆ ನಡೆಸುತ್ತಿರುವ ಪೊಲೀಸರು .ಡಿಜೆ ಹಳ್ಳಿ ಪೊಲೀಸರಿಂದ ಆರೋಪಿಯ ಮೆರವಣಿಗೆ ಮಾಡಿದ್ದು.ವ್ಯಾಪಾರಿಗಳು ಈತನಿಂದ ಭಯ ಪಡದಂತೆ ಮೆರವಣಿಗೆ ಮಾಡಿ ಪೊಲೀಸರು ಅಭಯ ನೀಡಿದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ