ಲಂಡನ್ ಪೊಲೀಸ್ ವ್ಯವಸ್ಥೆ ನಮಗೆ ಸ್ಪೂರ್ತಿದಾಯಕ: ಜಿ.ಪರಮೇಶ್ವರ್

ಶನಿವಾರ, 10 ಜೂನ್ 2017 (13:10 IST)
ಸಿಎಂ ಸಿದ್ದರಾಮಯ್ಯ ನಮ್ಮನ್ನು ಲಂಡನ್‌ಗೆ ಕಳುಹಿಸಿದ್ದರು. ಅಲ್ಲಿನ ಪೊಲೀಸ್ ವ್ಯವಸ್ಥೆ ನಮಗೆ ಸ್ಪೂರ್ತಿದಾಯಕವಾಗಿತ್ತು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
 
ಲಂಡನ್‌ನಲ್ಲಿ ಪೊಲೀಸ್ ಡಾಯಲ್ ಸೆಂಟರ್ ನೋಡಿದ್ದೇವೆ. ರಾಜ್ಯದ ಪೊಲಿಸ್ ಇಲಾಖೆಗೆ ಆಧುನಿಕರಣದ ಸ್ಪರ್ಷ ನೀಡಲಾಗುತ್ತಿದೆ. ಇಲಾಖೆಯ ಪರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. 
 
ಕಮಾಂಡೆಂಟ್ ಸೆಂಟರ್‌ನಿಂದ ನಗರದಾದ್ಯಂತ ಪ್ರಮುಖ ಸ್ಥಳಗಳಲ್ಲಿ ಹೈ ರೆಸ್ಯೂಲುಶನ್ 752 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ನಮ್ಮ 100 ಗೆ ಡಾಯಲ್ ಮಾಡಿದ ತಕ್ಷಣವೇ ಪೊಲೀಸರು ಘಟನಾ ಸ್ಥಳಕ್ಕೆ ಹಾಜರಾಗುತ್ತಾರೆ ಎಂದರು.
 
ಕಮಾಂಡೆಂಟ್ ಸೆಂಟರ್‌ನ 50 ಸಿಬ್ಬಂದಿ ಮೂರು ಶಿಫ್ಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಯಾವುದೇ ತೊಂದರೆಯಾದರೆ ತಕ್ಷಣವೇ ನೆರವಿಗೆ ಬರುತ್ತಾರೆ. ರಾಜ್ಯದ ಎಲ್ಲಾ ಕಮೀಶನರೇಟ್‌ಗಳಲ್ಲಿ ಕಮಾಂಡೆಂಟ್ ಸೆಂಟರ್ ಆರಂಭಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ.  

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ