ಒಂದು ಲಕ್ಷ ಕೊರೊನಾ ರೋಗಿಗಳಿಗೆ ಇದು ಇದೆ ಎಂದ ಬಿ.ಶ್ರೀರಾಮುಲು
ರಾಜ್ಯದಲ್ಲಿ ಒಂದು ಲಕ್ಷ ಕೊರೊನಾ ಸೋಂಕಿತ ರೋಗಿಗಳಿಗೆ ಬೇಕಾದದ್ದು ಇದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ದಾವಣಗೆರೆಯಲ್ಲಿಂದು ಮಾತನಾಡಿದ ಸಚಿವರು, ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದವರ ಪತ್ತೆ ಕಾರ್ಯ ಬಹುತೇಕ ಮುಗಿದಿದೆ. ಇದೀಗ ಎರಡನೇ ಹಂತದ ಸಂಪರ್ಕ ಹೊಂದಿದವರ ಪರೀಕ್ಷೆ ಕಾರ್ಯ ಪ್ರಗತಿಯಲ್ಲಿದೆ.
ರಾಜ್ಯದ ಮೂವತ್ತೊಂದು ಜಿಲ್ಲೆಗಳಲ್ಲೂ ಕೊರೊನಾ ಆಸ್ಪತ್ರೆ ಆರಂಭಿಸಲಾಗಿದೆ. ಆರುವರೆ ಸಾವಿರ ಐಸೋಲೇಷನ್ ವಾರ್ಡ್‌ಗಳು, ಒಂದು ಸಾವಿರ ಐಸಿಯು ಬೆಡ್ ಸಿದ್ಧಪಡಿಸಲಾಗಿದೆ. 150 ವೆಂಟಿಲೇಟರ್ ಖರೀದಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.