ಮೋದಿಗೂ ಒಂದೇ ವೋಟು, ಸಫಾಯಿ ಕರ್ಮಚಾರಿಗೂ ಒಂದೇ ವೋಟು : ಸಿಎಂ
ಶನಿವಾರ, 10 ಜೂನ್ 2023 (13:29 IST)
ಬೆಂಗಳೂರು : ಸಂವಿಧಾನ ಮೂಲಕ ಒಬ್ಬ ವ್ಯಕ್ತಿಯಿಂದ ಒಂದು ವೋಟ್. ಅದಕ್ಕೆ ಒಂದೇ ಬೆಲೆ ಇದೆ. ಮೋದಿಗೂ ಒಂದೇ ವೋಟು, ಸಪಾಯಿ ಕರ್ಮಚಾರಿಗೂ ಒಂದೇ ವೋಟ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಭೀಮ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಈ ದೇಶಕ್ಕೆ ಯೋಗ್ಯವಾದ ಸಂವಿಧಾನ ಕೊಟ್ಟಿದ್ದಾರೆ. ಸಮಾಜದ ಅವಶ್ಯಕತೆ ಅನುಗುಣವಾಗಿ ಸಂವಿಧಾನ ತಿದ್ದುಪಡಿ ಮಾಡಲು ಅವಕಾಶ ಕೊಟ್ಟಿದ್ದರು. ಸಂವಿಧಾನ ರಚನೆ ಮಾಡುವಾಗ ಜಗತ್ತಿನ ಅನೇಕ ದೇಶಗಳ ಸಂವಿಧಾನ ಓದಿ ಭಾರತಕ್ಕೆ ಯೋಗ್ಯವಾದ ಸಂವಿಧಾನ ನೀಡಿದ್ದಾರೆ.
ಯೋಗ್ಯವಾದವರ ಜತೆ ಇದ್ರೆ ಒಳ್ಳೆಯ ಸಂವಿಧಾನ, ಕೆಟ್ಟವರ ಕೈಯಲ್ಲಿ ಇದ್ರೆ ಅದು ಕೆಟ್ಟ ಸಂವಿಧಾನ. ದೇಶ, ರಾಜ್ಯದಲ್ಲಿ ಕೆಟ್ಟವರು, ಒಳ್ಳೆಯರು ಅಧಿಕಾರಕ್ಕೆ ಬಂದಿದ್ದಾರೆ. ಅವರು ಸಂವಿಧಾನದಡಿ ಇದ್ದು ಕೆಟ್ಟವರಾಗಿ ಕೆಲಸ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.