ಸೇವಾ ಸಿಂಧೂ ಅಡಿಯಲ್ಲಿ ಕೇವಲ 20 ರಿಂದ 30 ನೊಂದಣಿ ಮಾತ್ರ

ಗುರುವಾರ, 22 ಜೂನ್ 2023 (18:42 IST)
ಸರ್ಕಾರ ಉಚಿತವಾಗಿ ನೀಡುತ್ತಿರುವ 200 ಯುನಿಟ್ ವಿದ್ಯುತ್ ನ್ನು ಪಡೆಯಲು ಜನರು ನಾ ಮುಂದು ತಾ ಮುಂದು ಎಂದು ಮುಗಿಬಿಳುತ್ತಿದ್ದಾರೆ.ಆದರೆ ಇಂದಿಗೆ ಗೃಹ ಜ್ಯೋತಿ ಯೋಜನೆ ಐದನೇ ದಿನಕ್ಕೆ ಕಾಲಿಟ್ಟಿದೆ, ಗ್ರಾಹಕರು ಸೇವಾ ಸಿಂಧು ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳಲು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಬೆಳಗ್ಗೆ ಆಫೀಸ್ ಓಪನ್ ಆಗುವ ಮುಂಚೆಯೇ ಜನರು ಬಾಗಿಲಲ್ಲಿ ಬಂದು ಕ್ಯೂ ನಿಲುತ್ತಿದ್ದಾರೆ.ಆದರೆ ಗ್ರಾಹಕರಿಗೆ ಸರ್ವರ್ ಸಮಸ್ಯೆ ಬಿಟ್ಟು ಬಿಡದೆ ಕಾಡುತ್ತಿದೆ,ಇದರಿಂದ ಗ್ರಾಹಕರು ತಮ್ಮ ಅಳಲನ್ನು  ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.ಈ ಸರ್ವರ್ ಸಮಸ್ಯೆ ಯಿಂದ ಸರ್ಕಾರ ಎಚ್ಚೆತ್ತು ಹೊಸದಾಗಿ ಮತ್ತೊಂದು ವೆಬ್ ಸೈಟ್ ಬಿಡುಗಡೆ ಮಾಡಿದೆ, ಅದರಂತೆ ಗೃಹಜ್ಯೋತಿ ನೋಂದಣಿ ಪ್ರಕ್ರಿಯೆಯು ಕೊಂಚಮಟ್ಟಿಗೆ ಒಂದುಕಡೆ ಜೋರಾಗಿದೆ ಅಂತಾರೆ ಮತ್ತೊಂದು ಕಡೆ ಸಮಸ್ಯೆ ಹೆಚ್ಚಾಗಿದೆ ಅಂತಾರೆ ಇದರ ಮಧ್ಯಯೇ ಇಂದಿಗೆ ಐದನೇ ದಿನಕ್ಕೆ ಕಾಲಿಟ್ಟಿದ್ದೆ, ಸರ್ವರ್ ಸಮಸ್ಯೆಯ ಮಧ್ಯೆಯೂ ಬುಧವಾರ ಸಂಜೆ ವೇಳೆಗೆ ಒಟ್ಟು 12.51 ಲಕ್ಷ ಗ್ರಾಹಕರು ಸೇವಾ ಸಿಂಧು ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.ಗೃಹಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆಯು ಜೂನ್ 18 ರಂದು ಆರಂಭಗೊಂಡಿತ್ತು. ಮೊದಲ ದಿನ - 96,305, ಎರಡನೆಯ ದಿನ- 3,34,845 ಮೂರನೇ ದಿನ 4,64,225 ಹಾಗೂ ನಾಲ್ಕನೇ ದಿನ (ಬುಧವಾರ) 3.56 ಲಕ್ಷ ಗ್ರಾಹಕರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇಂದಿನಿಂದ ರಾಜ್ಯದ ಎಲ್ಲಾ ವಿದ್ಯುತ್ ಕಚೇರಿಗಳಲ್ಲಿ ಸಾರ್ವಜನಿಕರಿಗೆ ನೋಂದಣಿ ಮಾಡಲು ಪ್ರತ್ಯೇಕ ಲಾಗಿನ್ ಐಡಿ ಹಾಗೂ ಪ್ರತ್ಯೇಕ ಲಿಂಕ್ ಅನ್ನು ನೀಡಲಾಗಿದೆ. ಹಾಗಾಗಿ ಇಂದಿನಿಂದ ರಾಜ್ಯದ 2000 ವಿದ್ಯುಚ್ಛಕ್ತಿ ಕಚೇರಿಗಳಲ್ಲಿ ಗೃಹ ಜ್ಯೋತಿ ನೋಂದಣಿ ಪ್ರಕ್ರಿಯೆ ಸರಾಗವಾಗಿ ನಡೆಯಲು ತೆರೆದಿರುವಂತದ್ದು,ಜೊತೆಗೆ ಕರ್ನಾಟಕ ಒನ್, ಬೆಂಗಳೂರು ಒನ್ ಹಾಗು ಗ್ರಾಮ ಒನ್ ಜೊತೆಗೆ, ಸಾರ್ವಜನಿಕರು ತಮ್ಮ ಕಂಪ್ಯೂಟರ್, ಲ್ಯಾಪ್ಟಾಪ್, ಮೊಬೈಲ್ ಫೋನ್ ಗಳಲ್ಲಿ ಹಾಗೂ ಕೆಲವು ವಿದ್ಯುತ್ ಕಚೇರಿಗಳಲ್ಲಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.ಇದರಿಂದ ನಗರದಲ್ಲಿ ಗ್ರಾಹಕರಿಗೆ ಸರ್ವರ್ ಸಮಸ್ಯೆ ಬಿಸಿ ಮುಟ್ಟುತ್ತಿದೆ.ಇದರಿಂದ ಜನರು ಕಾದೂ ಕಾದೂ ಸುಸ್ತಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಈ ಗೃಹ ಜ್ಯೋತಿ ಯೋಜನೆ ನೋಂದಣಿ ಮಾಡಿಕೊಳ್ಳಲು ಯಾವುದೇ ಗಡುವನ್ನು ನಿಗದಿಪಡಿಸದ ಕಾರಣ ಗ್ರಾಹಕರು ಗಡಿಬಿಡಿಯಾಗದೇ, ಆತಂಕ ಪಡದೇ ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಮೂಲಕ ನೋಂದಾಯಿಸಬಹುದು ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ. ಈ ಯೋಜನೆಯನ್ನು ಪಡೆದುಕೊಳ್ಳಲು ಜನರು ನಾ ಮುಂದು ತಾ ಮುಂದು ಎಂದು ಮುಗಿಬಿಳುತ್ತಿದ್ದಾರೆ,ಮುಂದಿನ ದಿನಗಳಲ್ಲಿ ಇದೆಲ್ಲವೂ ಮಂದಿನ ದಿನಗಳಲ್ಲಿ ಸರಾಗವಾಗಿ ನಡೆಯುತ್ತದೆಯಾ ಎಂದು ಕಾದೂ ನೋಡ್ಬೀಕಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ