‘ತಾಜ್‌ಮಹಲ್‌ನಲ್ಲಿ ಬೀಗ ಹಾಕಿರುವ ಕೊಠಡಿ ತೆರೆಸಿ’
ಜಗತ್ತಿನ 7 ಅದ್ಭುತಗಳಲ್ಲಿ ಒಂದಾಗಿರುವ ತಾಜ್‌ಮಹಲ್‌ನಲ್ಲಿ ಬೀಗ ಹಾಕಿ ಮುಚ್ಚಿರುವ 22 ಕೋಣೆಗಳಿದ್ದು, ಬೀಗ ತೆಗೆಸಬೇಕು. ಆ ಕೋಣೆಗಳಲ್ಲಿ ಹಿಂದೂ ವಿಗ್ರಹ & ಧರ್ಮಗ್ರಂಥಗಳನ್ನು ಬಚ್ಚಿಡಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠಕ್ಕೆ ಅರ್ಜಿಯೊಂದು ಸಲ್ಲಿಕೆಯಾಗಿದೆ. ತಾಜ್‌ಮಹಲ್ ಕುರಿತು ಪುರಾತನ ವಿವಾದವೊಂದಿದೆ. ಅಲ್ಲಿ ಬೀಗ ಹಾಕಲ್ಪಟ್ಟ 20 ಕೋಣೆಗಳು ಇದ್ದು, ಅಲ್ಲಿಗೆ ಹೋಗಲು ಯಾರನ್ನೂ ಬಿಡುತ್ತಿಲ್ಲ. ಆ ಕೋಣೆಗಳಲ್ಲಿ ಹಿಂದು ವಿಗ್ರಹ, ಧರ್ಮಗ್ರಂಥಗಳು ಇವೆ ಎನ್ನಲಾಗಿದೆ. ಆ ಬಗ್ಗೆ ಪರಿಶೀಲನೆ ನಡೆಸಲಿ ಎಂದು ಅಯೋಧ್ಯೆ ಜಿಲ್ಲಾ ಬಿಜೆಪಿ ಮಾಧ್ಯಮ ಉಸ್ತುವಾರಿ ಡಾ| ರಜನೀಶ್ ಅರ್ಜಿ ಸಲ್ಲಿಸಿದ್ದಾರೆ..ಬೀಗ ತೆರೆದು ಕೊಠಡಿ ವೀಕ್ಷಿಸಿ, ವಿವಾದಕ್ಕೆ ತೆರೆ ಎಳೆಯುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.