ಆಪರೇಷನ್ ಅಸ್ತ ಬೇಕಿಲ್ಲ- ಸಲೀಂ ಅಹ್ಮದ್

ಮಂಗಳವಾರ, 29 ಆಗಸ್ಟ್ 2023 (19:00 IST)
ವಿಧಾನಸೌಧದಲ್ಲಿ MLC ಸಲೀಂ ಅಹ್ಮದ್ ಸುದ್ದಿಗೋಷ್ಠಿ ನಡೆಸಿದ್ದು,ನಮ್ಮ‌ ಸರ್ಕಾರಕ್ಕೆ 100 ದಿನ ಕಳೆದಿದೆ ಆ ಹಿನ್ನೆಲೆಯಲ್ಲಿ ಕೆಲ ವಿಚಾರ ಹೇಳಲಿದ್ದೇನೆ.ನುಡಿದಂತೆ ನಡೆದ ಸರ್ಕಾರ ನಮ್ಮ ಕಾಂಗ್ರೆಸ್ ಸರ್ಕಾರ.ನಾವು ಗೆದ್ದಿದ್ದೀವಿ ಅಂತ ಬೀಗಲ್ಲ ನಮ್ರತೆಯಿಂದ ಜನರ ಅಭಿವೃದ್ಧಿ ಗೆ ಸರ್ಕಾರ ಕೊಡ್ತಿದ್ದೇವೆ.5 ವರ್ಷ ಸುಭದ್ರ ಜನಪರ ಸರ್ಕಾರ ಕೊಡ್ತೀವಿ.ಸರ್ವ ಜನಾಂಗದ ಶಾಂತಿಯ ತೋಟ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮ ಬಾಳು ನಮ್ಮ ಸಿದ್ಧಾಂತ.5 ಗ್ಯಾರಂಟಿ ಗಳನ್ನ ಘೋಷಿಸಿದ್ದೋ, ಈಗಾಗ್ಲೆ 3 ಯೋಜನೆ ಜಾರಿಗೆ ತಂದಿದ್ದೇವೆ.ನಾಳೆ 4ನೇ ಗ್ಯಾರಂಟಿ ಜಾರಿಗೆ ಬರ್ತಿದೆ, ನಾಳೆಯ  ಐತಿಹಾಸಿಕ ಕಾರ್ಯಕ್ರಮ ಶಕ್ತಿ ಯೋಜನೆ ಪ್ರಪಂಚದಲ್ಲೇ ದೊಡ್ಡ ಕಾರ್ಯಕ್ರಮ.50 ಕೋಟಿ ಮಹಿಳೆಯರು ಈವರೆಗೆ ಉಪಯೋಗಿಸಿಕೊಂಡಿದ್ದಾರೆ.ಅನ್ನಭಾಗ್ಯ ಕಾರ್ಯಕ್ರಮದಲ್ಲಿ 4 ಕೋಟಿ 40 ಲಕ್ಷ ಜನರಿಗೆ ಸಹಾಯವಾಗಿದೆ.ಯುವನಿಧಿ ಡಿಸೆಂಬರ್ ನಲ್ಲಿ ಜಾರಿಯಾಗುತ್ತೆ ಎಂದು ಸಲೀಂ‌ ಅಹ್ಮದ್ ಹೇಳಿದ್ರು.
 
ಅಲ್ಲದೇ ಆಪರೇಷನ್ ಹಸ್ತ ನಮಗೆ ಬೇಕಿಲ್ಲ.ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಬಂದ್ರೆ ಹೈಕಮಾಂಡ್ ತೀರ್ಮಾನ ಮಾಡುತ್ತೆ.ಬಿಜೆಪಿಯವರು ನಮ್ಮ ಶಾಸಕರನ್ನು ಬಾಂಬೆಗೆ ಕರೆದುಕೊಂಡು ಹೋಗಿದ್ರು.ಅಂತಹ ಪರಿಸ್ಥಿತಿ ನಮಗೆ ಇಲ್ಲ, ಜನ ಸ್ಪಷ್ಟ ಬಹುಮತ ಕೊಟ್ಟಿದ್ದಾರೆ.ರಾಜ್ಯದ, ದೇಶದ ಅಭಿವೃದ್ಧಿ ಗೆ ಕಾಂಗ್ರೆಸ್ ಪಕ್ಷ ಬೇಕು.ಕೆಲವರು ನಮ್ಮ ಪಕ್ಷಕ್ಕೆ ಬರಲು ದೊಡ್ಡವರ ಜೊತೆ ಮಾತಾಡಿರಬಹುದು, ಆಮೇಲೆ ಹೈಕಮಾಂಡ್ ತೀರ್ಮಾನಿಸುತ್ತೆ.ಬಿಜೆಪಿ, ಜೆಡಿಎಸ್ ಶಾಸಕರು, ನಾಯಕರು ಕಾಂಗ್ರೆಸ್ ಗೆ ಬಂದ್ರೆ ಸ್ವಾಗತ.ಜಿಲ್ಲೆಗಳಲ್ಲಿ, ತಾಲ್ಲೂಕು ಗಳಲ್ಲಿ ನಮ್ಮ ಪಕ್ಷಕ್ಕೆ ಬಂದ್ರೆ ಸ್ವಾಗತ ಎಂದು ಸಲೀಂ ಅಹ್ಮದ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ