ವಿಟಿಯು ವಿಂಗಡನೆಗೆ ಹೆಚ್ಚುತ್ತಿದೆ ವಿರೋಧ
ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ ವಿಂಗಡನೆಗೆ ವಿರೋಧ ಹೆಚ್ಚಾಗುತ್ತಿದೆ.
ಬೆಳಗಾವಿಯ ವಿಟಿಯು ವಿಂಗಡನೆ ಕ್ರಮ ಖಂಡಿಸಿ ಕರ್ನಾಟಕ ನವ ನಿರ್ಮಾಣ ಪಡೆಯಿಂದ ಪ್ರತಿಭಟನೆ ನಡೆಯಿತು.
ವಿಭಜನೆ ವಾಪಾಸ್ಸು ಪಡೆಯುವಂತೆ ಪ್ರತಿಭಟನಕಾರರು ಆಗ್ರಹ ಮಾಡಿದರು.
ರಾಜ್ಯ ಸರ್ಕಾರದ ವಿರುದ್ಧ ನವ ನಿರ್ಮಾಣ ಪಡೆ ಕಾರ್ಯಕರ್ತರಿಂದ ಘೋಷಣೆ ಕೂಗಲಾಯಿತು. ಚಿಕ್ಕೋಡಿ ಪಟ್ಟಣದಲ್ಲಿ ಎಸಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಯಾವುದೇ ಕಾರಣಕ್ಕೂ ವಿಟಿಯು ವಿಂಗಡಿಸಬಾರದು ಎಂದು ಆಗ್ರಹಿಸಿ ಉಪ ವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.