ನಿಮಗೆ ಗೊತ್ತಾ..ರಾಜ್ಯದಲ್ಲಿ 3,000 ರೋಗಿಗಳು ಅಂಗಾಂಗ ಕಸಿಗೆ ಕಾಯುತ್ತಿದ್ದಾರೆ...

ಮಂಗಳವಾರ, 27 ಜೂನ್ 2017 (08:19 IST)
ಬೆಂಗಳೂರು:ರಾಜ್ಯದಲ್ಲಿ ಅಂಗಾಂಗ ದಾನಿಗಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ದಾನಿಗಳ ಸಂಖ್ಯೆ ಹೆಚ್ಚುತ್ತಿದ್ದರೂ ಬೇಡಿಕೆಯ ಪ್ರಮಾಣ ಅದಕ್ಕಿಂತ ಹೆಚ್ಚಾಗಿದೆಯಂತೆ. ಈ ಜನವರಿಯಿಂದ  ಜೂನ್‌ 15ರವರೆಗೆ 32 ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳು ನಡೆದಿವೆ.
 
2014ರಲ್ಲಿ 39 ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳು ನಡೆದಿದ್ದರೆ, 2016ರ ಹೊತ್ತಿಗೆ ಅವು 70ಕ್ಕೆ ಏರಿಕೆಯಾಗಿದ್ದವು. ಇದರಲ್ಲಿ ಮೂತ್ರಪಿಂಡ (ಕಿಡ್ನಿ) ಕಸಿ ಶಸ್ತ್ರಚಿಕಿತ್ಸೆಗಳ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಜೀವಸಾರ್ಥಕತೆ ಸೊಸೈಟಿ ಅಂಗಾಂಗ ಕಸಿಗಾಗಿ ಕರ್ನಾಟಕ ವಲಯ ಸಮನ್ವಯ ಸಮಿತಿಯನ್ನು (ಜೆಡ್‌ಸಿಸಿಕೆ) ಅಂಗಾಂಗ ದಾನಿಗಳ ಬಗ್ಗೆ ಆಸ್ಪತ್ರೆಗಳ ಮಾಹಿತಿಯನ್ನು ನೀಡುತ್ತವೆ. ಅದೇ ರೀತಿ ಅಂಗಗಳ ಅಗತ್ಯ ಇರುವ ರೋಗಿಗಳು ಇಲ್ಲಿ ಹೆಸರು ನೋಂದಾಯಿಸಿರುತ್ತಾರೆ. ದಾನಿಗಳು ಸಿಕ್ಕಾಗ ಕಸಿ ಮಾಡಲಾಗುತ್ತದೆ.
 
ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ (ವೈದ್ಯಕೀಯ) ಡಾ.ಟಿ.ಎಸ್. ಪ್ರಭಾಕರ್‌, ‘ಜೀವಸಾರ್ಥಕತೆ ಸೊಸೈಟಿ ಸೇವೆಗಳನ್ನು ವಿಸ್ತರಿಸುವ ಯೋಜನೆ ಇದೆ. ಈಗ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳನ್ನು ಬೆಂಗಳೂರು, ಮಂಗಳೂರು ಮತ್ತು ಬೆಳಗಾವಿಯಲ್ಲಿ ಮಾಡಲಾಗುತ್ತಿದೆ. ಈ ವರ್ಷ ಇನ್ನೂ ಮೂರು ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಪ್ರತಿ ವಲಯದಲ್ಲೂ ಕಸಿ ಕೇಂದ್ರಗಳು ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಂಗಾಂಗ ಸ್ವೀಕಾರ ಕೇಂದ್ರಗಳನ್ನು ಸ್ಥಾಪಿಸಲಾಗುವುದು’  ಎಂದು ತಿಳಿಸಿದ್ದಾರೆ.
 
 

ವೆಬ್ದುನಿಯಾವನ್ನು ಓದಿ