ಉಪಚುನಾವಣೆ ಫಲಿತಾಂಶ: ಕಮಲ ಪಾಳೆಯಕ್ಕೆ ಖಡಕ್ ಎಚ್ಚರಿಕೆ

ಬುಧವಾರ, 7 ನವೆಂಬರ್ 2018 (16:20 IST)
ರಾಜ್ಯದ ಐದು ಕ್ಷೇತ್ರಗಳ ಉಪಚುನಾವಣೆಯು ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ಉಪಚುನಾವಣೆಯ ಫಲಿತಾಂಶ ಬಿಜೆಪಿಗೆ ಖಡಕ್ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
ಮೂರು ಲೋಕಸಭೆ ಹಾಗೂ ಎರಡು ವಿಧಾನ ಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಪಕ್ಷಗಳಿಗೆ ದೀಪಾವಳಿ ಗಿಫ್ಟ್ ಭರ್ಜರಿಯಾಗಿ ನೀಡಿದಂತಾಗಿದೆ. ಆದರೆ ಬಿಜೆಪಿಗೆ ಆತ್ಮಾವಲೋಕನ ಹಾಗೂ ಖಡಕ್ ಎಚ್ಚರಿಕೆಯ ಸಂದೇಶವನ್ನು ನೀಡಿದಂತಾಗಿದೆ.

ಐದು ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರಗಳನ್ನು ದೋಸ್ತಿ ಪಕ್ಷಗಳು ತಮ್ಮ ಬುಟ್ಟಿಗೆ ಹಾಕಿಕೊಂಡಿವೆ. ಬಿಜೆಪಿ ಶಿವಮೊಗ್ಗದಲ್ಲಿ ಮಾತ್ರ ಗೆದ್ದು ನಿಟ್ಟಿಸಿರು ಬಿಟ್ಟಿದೆ.

ಬಳ್ಳಾರಿ ಗಣಿಧಣಿಗಳಿಂದ ಕೈ ತಪ್ಪಿದ್ದು, ಕೈ ವಶವಾಗಿದೆ. ಬಿಜೆಪಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕರೆಸಿಕೊಳ್ಳುತ್ತಿದ್ದ ಬಿ.ಶ್ರೀರಾಮುಲುಗೆ ಈ ಫಲಿತಾಂಶ ಆಘಾತ ಉಂಟುಮಾಡಿದೆ.

ಬಿಜೆಪಿಗೆ ಎಚ್ಚರಿಕೆಯ ಸಂದೇಶ ರವಾನಿಸುವಲ್ಲಿ ಉಪಚುನಾವಣೆ ಫಲಿತಾಂಶ ಯಶಸ್ವಿಯಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ