ಪಾಕ್ ಬಣ್ಣ ಬಯಲು - ಚಿನ್ನ ಬಿಟ್ಟು ಟೊಮೆಟೋ ಕಿವಿಯೋಲೆ, ಹಾರ ಹಾಕಿಕೊಂಡ ವಧು

ಬುಧವಾರ, 20 ನವೆಂಬರ್ 2019 (17:53 IST)
ಕಾಲು ಕೆರೆದು ಜಗಳಕ್ಕೆ ಮುಂದಾಗೋ ಪಾಕಿಸ್ತಾನದ ಚಿತ್ರಣವನ್ನು ಅಲ್ಲಿನ ವಧುವೊಬ್ಬಳು ಬಹಿರಂಗಪಡಿಸಿದ್ದಾಳೆ.

ಪಾಕಿಸ್ತಾನದಲ್ಲಿ ಟೊಮೆಟೋ ಬೆಲೆ 350 ರಿಂದ 400 ರೂ. ವರೆಗೆ ಪ್ರತಿ ಕೆಜಿಗೆ ಇದೆ.

ಹೀಗಾಗಿ ವಧುವೊಬ್ಬಳು ತನ್ನ ಮದುವೆ ದಿನ ಟೊಮೆಟೋದಿಂದ ಮಾಡಿದ ಕಿವಿಯೋಲೆ, ಹಾರ ಧರಿಸಿ ಗಮನ ಸೆಳೆದಿದ್ದಾಳೆ.

ಟೊಮೆಟೋ ಹಾರ, ಕಿವಿಯೋಲೆ ಧರಿಸಿರೋ ವಧುವಿನ ವಿಡಿಯೋ ವೈರಲ್ ಆಗಿದೆ. ನೆಕ್ಲೇಸ್, ಬೈತಲೆ ಬೊಟ್ಟನ್ನೂ ಸಹ ಟೊಮೆಟೋದಿಂದಲೇ ಮಾಡಿ ವಧು ಸಿಂಗರಿಸಿಕೊಂಡು ಪೋಸ್ ನೀಡಿದ್ದಾಳೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ