ಗ್ರಾಮದೇವತೆ ಜಾತ್ರೆಯಲ್ಲಿ ಪಂಚಾಯಿತಿ ಸದಸ್ಯ ಕೊಲೆಯಾಗಿದ್ದೇಕೆ?

ಮಂಗಳವಾರ, 19 ಫೆಬ್ರವರಿ 2019 (16:47 IST)
ಆ ಊರಲ್ಲಿ ವರ್ಷಕ್ಕೊಮ್ಮೆ ದೇವಾಲಯದ ಬಾಗಿಲು ತೆರೆದು ಉತ್ಸವ ಮಾಡುವ ಪದ್ಧತಿಯಿದೆ. ಹೀಗೆ ದೇವಾಲಯದ ಬಾಗಿಲು ತೆಗೆದಾಗ ವಿಶೇಷ ಜಾತ್ರೆ ನಡೆಯುತ್ತಿರುವಾಗಲೇ ಪಂಚಾಯಿತಿ ಸದಸ್ಯನೊಬ್ಬ ಭೀಕರವಾಗಿ ಕೊಲೆಯಾಗಿಹೋಗಿದ್ದಾನೆ.

ಹಳೇ ದ್ವೇಷ ಹಿನ್ನೆಲೆ, ಉತ್ಸವದಲ್ಲಿ ಗಲಾಟೆ ತೆಗೆದು ಗ್ರಾಪಂ ಸದಸ್ಯನ ಭೀಕರ ಹತ್ಯೆ ಮಾಡಲಾಗಿದ್ದು, ಘಟನೆಯಲ್ಲಿ  ನಾಲ್ವರಿಗೆ ಗಾಯಗಳಾಗಿವೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಿಮ್ಮೇಗೌಡ(50) ಕೊಲೆಯಾದ ಗ್ರಾ.ಪಂ ಸದಸ್ಯನಾಗಿದ್ದಾನೆ.  

ಗ್ರಾಮದೇವತೆ ದೇವೀರಮ್ಮ ಉತ್ಸವದ ವೇಳೆ ಘಟನೆ ನಡೆದಿದೆ. ವರ್ಷಕ್ಕೊಮ್ಮೆ ದೇವಾಲಯದ ಬಾಗಿಲು ತೆರೆದು ಉತ್ಸವ ಮಾಡುವ ವಿಶೇಷ ಜಾತ್ರೆಯಲ್ಲಿ, ದೇವಿಯ ಉತ್ಸವದ ಮೆರವಣಿಗೆ ವೇಳೆ ಜಗಳ ತೆಗೆದು ಏಕಾಏಕಿ
ತಿಮ್ಮೇಗೌಡರಿಗೆ ಲಾಂಗು, ಮಚ್ಚಿನಿಂದ ಹಲ್ಲೆ ಮಾಡಿ ಬಳಿಕ ಚಾಕು ಇರಿದು ಕೊಲೆ ಮಾಡಲಾಗಿದೆ.

ಬಿಡಿಸಲು ಬಂದ ನಾಲ್ಕು ಜನರಿಗೂ ಗಂಭೀರ ಗಾಯಗಳಾಗಿವೆ. ವಿನಾಯಕ, ಗೌತಮ್, ಮಹೇಶ್, ಸ್ವಾಮೀಗೌಡಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳು ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತಿಮ್ಮೇಗೌಡರ ತಮ್ಮನ ಮಗಳನ್ನು ಅದೇ ಗ್ರಾಮದ ಮದನ್ ಎಂಬೋರು ಪ್ರೇಮ ವಿವಾಹ ವಾಗಿದ್ರು. ಪದೇ ಪದೇ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ನ್ಯಾಯ ಪಂಚಾಯಿತಿ ಮಾಡಿಸಿದ್ದರು ತಿಮ್ಮೇಗೌಡ. ಆಗ ವಿಚ್ಛೇದನ ನೀಡುವಂತೆ ಪಂಚಾಯಿತಿಯಲ್ಲಿ ತೀರ್ಮಾನವಾಗಿತ್ತು.

ಈ ಹಳೇ ದ್ವೇಷದ ಹಿನ್ನೆಲೆಯಿಂದ ಉತ್ಸವದ ವೇಳೆ ಗಲಾಟೆ ತೆಗೆದು ಕೊಲೆ ಮಾಡಲಾಗಿದೆ. ದೇವೇಗೌಡ, ಯೋಗೇಗೌಡ, ಮದನ, ಕುಮಾರ, ಚಂದು ಎಂಬೋರಿಂದ ಕೊಲೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿ, ಎಪಿಎಂಸಿ ಸದಸ್ಯ ಸ್ವಾಮೀಗೌಡ ಹೇಳಿಕೆ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ