ಮಧ್ಯರಾತ್ರಿಯಾದ್ರೆ ಮೆಟ್ರೋ ರೈಲಿಗೆ ಹತ್ತಕ್ಕೂ ಭಯ..!

ಭಾನುವಾರ, 9 ಜುಲೈ 2017 (09:26 IST)
ಬೆಂಗಳೂರು: ಮೆಟ್ರೋ ರೈಲು ಬೆಂಗಳೂರಿನಲ್ಲಿ ಓಡಾಡಲು ಪ್ರಾರಂಭಿಸಿದ ಮೇಲೆ ನಮ್ಮ ರಾಜಧಾನಿಗೊಂದು ಗರಿಮೆ ಎಂದು ಹೆಮ್ಮೆಪಟ್ಟುಕೊಂಡಿದ್ದೆವು. ಇದೀಗ ಪ್ರಯಾಣಿಕರನ್ನು ಸೆಳೆಯಲು ಮೆಟ್ರೋ ಕೈಗೊಂಡ ನಿರ್ಧಾರವೊಂದು ಸಂಕಟ ತಂದಿದೆ.


ಬಿಎಂಆರ್ ಸಿ ಏನೋ ಪ್ರಯಾಣಿಕರನ್ನು ಸೆಳೆಯಲು ಮಧ್ಯರಾತ್ರಿವರೆಗೆ ಮೆಟ್ರೋ ಸೇವೆ ಮುಂದುವರಿಸಿದೆ. ಆದರೆ ಈ ಸಂದರ್ಭದಲ್ಲಿ ಸಭ್ಯ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಲೂ ಭಯಪಡುವಂತಾಗಿದೆ.

ಕಾರಣ, ಕುಡುಕರ ಹಾವಳಿ. ತಡರಾತ್ರಿಯಲ್ಲಿ ರೈಲು ಹತ್ತುವ ಕುಡುಕರು ರೈಲಿನೊಳಗೆ ಉಗಿಯುವುದು, ವಾಂತಿ ಮಾಡುವುದು, ಅಸಭ್ಯವಾಗಿ ವರ್ತಿಸುವುದು, ಹುಡುಗಿಯರನ್ನು ಚುಡಾಯಿಸುವುದು ಮಾಡುತ್ತಿರುತ್ತಾರೆ ಎಂದು ಪ್ರಯಾಣಿಕರೇ ದೂರುತ್ತಿದ್ದಾರೆ. ಹೀಗಾಗಿ ಮೆಟ್ರೋ ರೈಲಿಗೆ ಹತ್ತಿಸುವ ಮೊದಲು ಪ್ರಯಾಣಿಕರು ಮದ್ಯಪಾನ ಮಾಡಿದ್ದಾರೆಯೇ ಎಂದು ಕೂಡಾ ಪರೀಕ್ಷೆ ಮಾಡಿ ಬಿಡಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ.. ಬಂಟ್ವಾಳ ಈಗ ಬೂದಿ ಮುಚ್ಚಿದ ಕೆಂಡ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ