ಬಸ್ ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಟಿಕೆಟ್ ಸಿಗೋದಿಲ್ಲ

ಮಂಗಳವಾರ, 19 ಮೇ 2020 (20:21 IST)
ಬಸ್ ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಕೆಲವು ದಿನಗಳವರೆಗೆ ಟಿಕೆಟ್ ಸಿಗೋದಿಲ್ಲ.

ಇದೆಂಥಾ ಸುದ್ದಿ. ಜನರನ್ನು ಉಚಿತವಾಗಿ ಕರೆದೊಯ್ಯುತ್ತಾರಾ ಅಂತ ಪ್ರಶ್ನೆ ಕೇಳಬೇಡಿ. ಮೇ ಅಂತ್ಯದವರೆಗೆ ಬಿಎಂಟಿಸಿ ಬಸ್ ಗಳಲ್ಲಿ ನೀವು ಪ್ರಯಾಣ ಮಾಡಬೇಕಾದರೆ ದಿನದ, ವಾರದ, ತಿಂಗಳ ಪಾಸ್ ಪಡೆದುಕೊಳ್ಳಬೇಕು.

ಬಸ್ ನಲ್ಲಿ ನಿರ್ವಾಹಕರು ಟಿಕೆಟ್ ಕೊಡೋದಿಲ್ಲ. ಪಾಸ್ ಇದ್ದರಷ್ಟೇ ಇಲ್ಲಿ ಪ್ರಯಾಣಕ್ಕೆ ಅವಕಾಶ ಸಿಗಲಿದೆ.

ಕೊರೊನಾ ತಡೆಗೆ ಪ್ರಯಾಣಿಕರು ಮಾಸ್ಕ್ ಧರಿಸಿದ್ದಾರೋ ಇಲ್ಲವೋ, ಸರದಿ ಸಾಲಿನಲ್ಲಿ ಸೋಶಿಯಲ್ ಡಿಸ್ಟಂಸ್ ಮೆಂಟೈನ್ ಮಾಡ್ತಿದ್ದಾರೋ ಇಲ್ಲವೋ ಎನ್ನುವುದನ್ನು ಚಾಲಕ ಹಾಗೂ ನಿರ್ವಾಹಕರೇ ನೋಡಿಕೊಳ್ಳಬೇಕಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ