ಜಯದೇವ ಆಸ್ಪತ್ರೆಯಲ್ಲಿ ತಪಾಸಣೆಗೆ ಮುಗಿಬಿದ ಜನ

ಶನಿವಾರ, 6 ನವೆಂಬರ್ 2021 (13:25 IST)
ಪುನೀತ್ ರಾಜ್‍ಕುಮಾರ್ ನಿಧನದ ನಂತರ ಜನರಿಗೆ ಆರೋಗ್ಯದ ಮೇಲೆ ಬಹಳಷ್ಟು ಕಾಳಜಿ ಬಂದಂತೆ ಕಾಣಿಸುತ್ತಿದೆ. ಹೀಗಾಗಿಯೇ ಜಯದೇವ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಶೇ.30ರಷ್ಟು ಹೆಚ್ಚಾಗಿದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.ಹೃದಯಕ್ಕೆ ಸಂಬಂಧಿಸಿದ ಚಿಕಿತ್ಸೆ ಪಡೆಯಲು ಎಷ್ಟೋ ರೋಗಿಗಳು ನಾಮುಂದು ತಾಮುಂದು ಎಂಬಂತೆ ಬರುತ್ತಲೇ ಇದ್ದಾರೆ. ಸಾಮಾನ್ಯವಾಗಿ ಜಯದೇವ ಆಸ್ಪತ್ರೆಯಲ್ಲಿ ಹೊರರೋಗಿಗಳ ಸಂಖ್ಯೆ 1200 ಇರುತ್ತಿತ್ತು. ಆದರೆ ಈಗ ಹೊರ ರೋಗಿಗಳ ಸಂಖ್ಯೆ 1700ರಿಂದ 1800ಗೆ ಏರಿಕೆ ಆಗಿದೆ.
ಹಬ್ಬದ ದಿನ ಕೂಡ ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. ಸಾಮಾನ್ಯವಾಗಿ ಹಬ್ಬದ ದಿನ 600 ಜನ ಹೊರ ರೋಗಿಗಳು ಬರುತ್ತಿದ್ದು,ವಯಸ್ಕರು, ವಯಸ್ಸಾದವರು ಕೂಡ ಚೆಕಪ್‍ಗೆ ಬರುತ್ತಾ ಇದ್ದಾರೆ ಎಂದು ಹೇಳಿದರು. ಒಟ್ಟಿನಲ್ಲಿ ಪುನೀತ್ ಸಾವು ಎಲ್ಲರಿಗೂ ಒಂದು ಪಾಠ ಕಲಿತಂತಾಗಿದೆ. ಈ ರೀತಿಯಲ್ಲಿ ಜನರು ಎಚ್ಚರದಿಂದ್ದಾರೆಂದು ವೈದ್ಯರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ