ಕಪ್ಪು ಹಣ ತಡೆಗಟ್ಟಲು 500, 1000 ರೂಪಾಯಿ ನೋಟ್‌ಗಳನ್ನು ಬ್ಯಾನ್ ಮಾಡಿರುವು ಹಿನ್ನೆಲೆಯಲ್ಲಿ ಜನಸಾಮನ್ಯರು ಕೇವಲ ನಾಲ್ಕು ಸಾವಿರ ರೂಪಾಯಿಗಾಗಿ ಎಟಿಎಂ ಕೇಂದ್ರದ ಬಳಿ ದಿನಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ, ಕೋಟಿ ಕೋಟಿ ಲೂಟಿ ಹೊಡೆದು ಹಣ ಸಂಪಾದಿಸಿರುವ ಲೂಟಿಕೋರರು ಹಣ ಬದಲಾಯಿಸಿಕೊಳ್ಳಲು ವಾಮಾಮಾರ್ಗ ಅನುಸರಿಸುತ್ತಿರುವ ಆಘಾತಕಾರಿ ಸುದ್ದಿ ತುಮಕೂರಿನ ಪಾವಗಡದಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಪಾವಗಡದ ಕರ್ನಾಟಕ ಬ್ಯಾಂಕ್‌ನಲ್ಲಿ ಹಣ ಜಮಾ ಮಾಡಿ, ಬ್ಯಾಂಕಿನಿಂದ ನೂರು ಮತ್ತು ಐವತ್ತು ರೂಪಾಯಿ ನೋಟುಗಳ ಮೊತ್ತದ 60 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ಹೋಗುತ್ತಿರುವದನ್ನು ಸಾರ್ವಜನಿಕರು ತಮ್ಮ ಮೊಬೈಲ್‌ಗಳಲ್ಲಿ ರೆಕಾರ್ಡ್ ಮಾಡಿಕೊಂಡಿರುವುದು ಸುದ್ದಿಯಾಗಿದೆ.
ಆದರೆ, ಮಾಧ್ಯಮಗಳಲ್ಲಿ ಬಿತ್ತರವಾದ ವರದಿಗಳಲ್ಲಿ ಸತ್ಯಾಂಶವಿಲ್ಲ. ನಮ್ಮಲ್ಲಿರುವ ವಾಹನಗಳ ಕೊರತೆಯಿಂದಾಗಿ ಗುತ್ತಿಗೆದಾರರ ಕಾರನ್ನು ಬಳಸಿಕೊಳ್ಳಲಾಯಿತು. ಕಾನೂನಿನ ಪ್ರಕಾರ ತಪ್ಪು. ಆದರೆ ಜನರಿಗೆ ಅಗತ್ಯವಾದ ಹಣ ಸಂದಾಯಿಸಬೇಕು ಎನ್ನುವ ಉದ್ದೇಶದಿಂದ ಆ ರೀತಿ ಮಾಡಲಾಗಿದೆ ಎಂದು ಬ್ಯಾಂಕ್‌ಎಜಿಎಂ ತಿಳಿಸಿದ್ದಾರೆ.