ನಟಿ ಪವಿತ್ರ ಗೌಡ ಮತ್ತೆ ದರ್ಶನ್ ಜತೆ ಕಾಣಿಸಿಕೊಂಡಿದ್ದೇಕೆ ಗೊತ್ತಾ…?

ಮಂಗಳವಾರ, 19 ಸೆಪ್ಟಂಬರ್ 2017 (17:35 IST)
ಬೆಂಗಳೂರು: ನಟಿ ಪವಿತ್ರ ಗೌಡ ಟ್ವಿಟರ್ ಅಕೌಂಟ್ ನಲ್ಲಿ ನಟ ದರ್ಶನ್ ಜತೆಗಿರುವ ಫೋಟೊ ಅಪ್ ಲೋಡ್ ಆಗಿತ್ತು. ಆಗ ಇವರಿಬ್ಬರ ಮಧ್ಯೆ ಏನೋ ನಡೀತಿದೆ ಎಂಬ ಗುಮಾನಿ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡಿತ್ತು. ಆ ಅಂತೆ ಕಂತೆಗಳಿಗೆ ತೆರೆ ಬೀಳುವ ಮೊದಲೇ ಈಗ ಮತ್ತೊಂದು ಫೋಟೊ ವೈರಲ್ ಆಗಿದೆ.

ಕುರುಕ್ಷೇತ್ರ ಸಿನಿಮಾ ಸದ್ಯ ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭರ್ಜರಿ ಸೆಟ್ ನಲ್ಲಿ ಶೂಟಿಂಗ್ ನಡೀತಿದೆ. ಆದರೆ ಕುರುಕ್ಷೇತ್ರ ಸೆಟ್ ನಲ್ಲಿಯೂ ಪವಿತ್ರ ಗೌಡ ಕಾಣಿಸಿಕೊಂಡು ಅಂತೆ ಕಂತೆಗಳ ಗಾಸಿಪ್ ಗೆ ಇಂಬು ನೀಡುವಂತಿದೆ. ಸೆಟ್ ನಲ್ಲಿ ದರ್ಶನ್ ಜತೆಮಾತನಾಡುತ್ತಿರುವ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಇದಾವುದರ ಬಗ್ಗೆಯೂ ದರ್ಶನ್ ಆಗಲಿ, ಪವಿತ್ರ ಗೌಡ ಆಗಲಿ ತುಟಿಬಿಚ್ಚಿಲ್ಲ.

ಕಳೆದ ಬಾರಿಯೇ ದರ್ಶನ್ ಜತೆಗಿನ ಫೋಟೊವನ್ನು ಪವಿತ್ರ ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಿದ್ರು. ಆ ಫೋಟೊ ತೆಗೆಯುವಂತೆ ಅಭಿಮಾನಿಗಳು ವಿನಂತಿ ಮಾಡಿದರೂ ಸಹ, `ಕಮೆಂಟ್ ಮಾಡಿದ ಎಲ್ಲರಿಗೂ ಧನ್ಯವಾದ’ ಅಂತ ಹೇಳಿ ಪವಿತ್ರ ಗೌಡ ಸುಮ್ಮನಾಗಿದ್ರು.

ಈ ಹಿಂದೆ ಇದೇ ರೀತಿ ನಟಿ ನಿಖಿತಾ ಬಗ್ಗೆ ಸಹ ಇದೇ ರೀತಿ ಗಾಸಿಪ್ ಹಬ್ಬಿತ್ತು. ಆದರೆ ಆ ಗಾಸಿಪ್ ಗೆ ತೆರೆ ಬಿದ್ದಿತ್ತು. ಈಗ ಪವಿತ್ರ ಗೌಡ ಟ್ವಿಟರ್ ನಲ್ಲಿ ದರ್ಶನ್ ಜತೆಗಿನ ಸೆಲ್ಫಿ ಫೋಟೊ ಹಾಕಿರೋದು ಮತ್ತೆ ವಿವಾದ ಸೃಷ್ಟಿಯಾಗಿದೆ.  ಇವರಿಬ್ಬರ ಮಧ್ಯೆ ಅದೇನು ನಡೆಯುತ್ತಿದೆಯೋ ಗೊತ್ತಿಲ್ಲ. ಆದರೆ ಇದರಿಂದ ಅಭಿಮಾನಿಗಳು ಗೊಂದಲಕ್ಕೊಳಗಾಗಿರೋದಂತು ಸತ್ಯ. ಈ ವಿವಾದಕ್ಕೆ ದರ್ಶನ್ ಮತ್ತು ಪವಿತ್ರ ಗೌಡ ಪ್ರತಿಕ್ರಿಯೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆಯಬೇಕು ಎಂದು ಅಭಿಮಾನಿಗಳು ಮನವಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ