ಬೇಗ ಏಳಲು ಪವಿತ್ರಾ ಗೌಡ ತಕರಾರು, ಕಮಿಷನ್ ರಿಂದ ಕ್ಲಾಸ್

Krishnaveni K

ಶನಿವಾರ, 15 ಜೂನ್ 2024 (10:16 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ದರ್ಶನ್, ಪವಿತ್ರಾ ಗೌಡ ಮತ್ತು ಗ್ಯಾಂಗ್ ಗೆ ಯಾವುದೇ ವಿಐಪಿ ಟ್ರೀಟ್ ಮೆಂಟ್ ನೀಡದಂತೆ ಸ್ವತಃ ಪೊಲೀಸ್ ಕಮಿಷನರ್ ದಯಾನಂದ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ದರ್ಶನ್, ಪವಿತ್ರಾ ಗೌಡ ಸೆಲೆಬ್ರಿಟಿಗಳು ಎಂದ ಮಾತ್ರಕ್ಕೆ ಅವರಿಗೆ ವಿಶೇಷ ಸೌಲಭ್ಯ ನೀಡುವಂತಿಲ್ಲ ಎಂದು ಕಮಿಷನರ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ದರ್ಶನ್ ಅರೆಸ್ಟ್ ಆದ ದಿನ ಬಿರಿಯಾನಿ ನೀಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ನಗರ ಪೊಲೀಸ್ ಆಯುಕ್ತ ದಯಾನಂದ್ ವಿಐಪಿ ಟ್ರೀಟ್ ಮೆಂಟ್ ಕೊಟ್ಟ ಪೊಲೀಸರನ್ನು ಕರೆಸಿ ಕ್ಲಾಸ್ ತೆಗೆದುಕೊಂಡಿದ್ದರು.

ಇದಾದ ಬಳಿಕ ದರ್ಶನ್ ಮತ್ತು ಇತರರಿಗೆ ಸಾಮಾನ್ಯ ಕೈದಿಗಳಂತೇ ಟ್ರೀಟ್ ಮಾಡಲಾಗಿದೆ. ಸಾಮಾನ್ಯ ಕೈದಿಗಳಂತೆ ದರ್ಶನ್ ರನ್ನೂ ನೆಲದ ಮೇಲೆ ಕೂರಿಸಲಾಗಿದೆ ಎನ್ನಲಾಗಿದೆ. ಸಾಮಾನ್ಯ ಕೈದಿಗಳಿಗೆ ನೀಡುವಂತೆ ಆಹಾರವನ್ನು ಒದಗಿಸಲಾಗುತ್ತಿದೆ. ಈ ಬಗ್ಗೆ ತನಿಖಾಧಿಕಾರಿಗಳಿಗೆ ಕಮಿಷನರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಅಷ್ಟೇ ಅಲ್ಲ, ಎ1 ಆರೋಪಿಯಾಗಿರುವ ಪವಿತ್ರಾ ಗೌಡರನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿರಿಸಲಾಗಿದೆ. ವಿಚಾರಣೆ ವೇಳೆಗೆ ಪೊಲೀಸ್ ಠಾಣೆಗೆ ಕರೆದುಕೊಂಡು ಬರಲಾಗುತ್ತಿದೆ. ತಡರಾತ್ರಿವರೆಗೆ ವಿಚಾರಣೆಯಿರುವುದರಿಂದ ಬೆಳಿಗ್ಗೆ ಬೇಗ ಏಳಲು ಪವಿತ್ರಾ ತಕರಾರು ತೆಗೆದಿದ್ದರು ಎನ್ನಲಾಗಿದೆ. ಆದರೆ ಕಮಿಷನರ್ ದಯಾನಂದ್ ಸ್ಟ್ರಿಕ್ಟ್ ಆಗಿ ಕ್ಲಾಸ್ ತೆಗೆದುಕೊಂಡಿದ್ದು, 7 ಗಂಟೆಗೆ ವಿಚಾರಣೆಗೆ ಬರಲೇಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ