‘ಸಂಸ್ಕ್ರತಿ ಇಲ್ಲದವರು ಸಂಸ್ಕ್ರತಿ ಬಗ್ಗೆ ಮಾತಾಡ್ಬಾರ್ದು’
ಭೂತ, ಕೋಲ ಸಂಸ್ಖೃತಿ ಹಿಂದೂ ಧರ್ಮದ ಸಂಪ್ರದಾಯವಲ್ಲ ಎಂಬ ನಟ ಚೇತನ್ ಹೇಳಿಕೆ ವಿಚಾರಕ್ಕೆ ಸಚಿವ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಂಸ್ಕ್ರತಿ ಇಲ್ಲದವರು ಸಂಸ್ಕ್ರತಿ ಬಗ್ಗೆ ಮಾತನಾಡಬಾರದು. ದೈವ ನರ್ತನ ಹಿಂದೂ ಸಂಸ್ಕ್ರತಿಯ ಒಂದು ಭಾಗ. ಇದನ್ನು ಮತ್ತಷ್ಟು ಗಟ್ಟಿ ಮಾಡುತ್ತೇವೆ. ದೈವಾರಾಧನೆ ನಮ್ಮ ತುಳುನಾಡಿನ ಸಾಂಸ್ಕೃತಿಕ ಪ್ರತಿಬಿಂಬ. ಯಾರೋ ಒಬ್ಬ ವ್ಯಕ್ತಿ ಹಾಗೆ ಹೇಳಿದ್ರೆ ಆ ಸಂಸ್ಕೃತಿಯಿಂದ ಯಾರೂ ದೂರ ಆಗಲ್ಲ. ಭೂತಾರಾಧನೆ ಹಿಂದೂ ಸಂಸ್ಕೃತಿಯ ಗಟ್ಟಿಯಾದ ಭಾಗವಾಗಿದೆ ಎಂದರು. ಇನ್ನು ರಾಮಮಂದಿರ ಸ್ಫೋಟಕ್ಕೆ PFI ಸಂಚು ರೂಪಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ತುಷ್ಟೀಕರಣದ ರಾಜಕಾರಣಕ್ಕೆ PFI ಅನ್ನು ದೇಶದಲ್ಲಿ ಬೆಂಬಲಿಸಲಾಗ್ತಿದೆ. ಎಲ್ಲ ರಾಜಕೀಯ ಪಕ್ಷಗಳು ಇಂಥ ಸಂಘಟನೆಗಳನ್ನು ವಿರೋಧಿಸುವವರೆಗೂ ಇಂಥ ಶಕ್ತಿಗಳು ವಿಜೃಂಭಿಸುತ್ತಿರುತ್ತವೆ. ಈಗಾಗಿ ಎಲ್ಲರು ಒಂದುಗೂಡಿ ಇಂತಹ ಸಂಘಟನೆಗಳನ್ನು ಮಟ್ಟಹಾಕಬೇಕು ಎಂದರು.