ಬೆಂಗಳೂರು-ನಗರದಲ್ಲಿ ಪಿಜಿ ಆರಂಭಿಸಲು ಬಿಬಿಎಂಪಿಯಿಂದ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು.ಅಪರಾಧ ಚಟುವಟಿಕೆಗಳನ್ನ ತಡೆಗಟ್ಟಲು (PG) ಕೇಂದ್ರಗಳಿಗೆ ಪೊಲೀಸರು ಮಾರ್ಗಸೂಚಿ ಪ್ರಕಟಿಸಿದ್ದಾರೆ.ಈ ಬಗ್ಗೆ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತ ಅವರಿಂದ ಕಡ್ಡಾಯವಾಗಿ ಪಾಲಿಸುವಂತೆ ಪ್ರಕಟಿಸಿದ್ದಾರೆ.ಪಿಜಿ ವಾಸಕ್ಕೆ ಬರುವ ಎಲ್ಲ ವ್ಯಕ್ತಿಜಗಳ ಗುರುತಿನ ಚೀಟಿ ಇತ್ತೀಚಿನ ಭಾವಚಿತ್ರ ಮತ್ತು ರಕ್ತ ಸಂಬಂಧಿಗಳ ವಿವರ,ಮೊಬೈಲ್ ನಂಬರ್ ದಾಖಲೆ ಮಾಡಬೇಕು.
ಇನ್ನೂ ಪಿಜೆಗೆ ಭೇಟಿ ನೀಡಲು ಬರುವ ಸಂಬಂಧಿಕರಗಿರಲಿ ಅಥವಾ ಯಾರೇ ಆಗಿರಲಿ ಅವರ ವಿವರ ಪ್ರತ್ಯೇಕವಾಗಿ ನಿರ್ವಹಿಸಬೇಕು.ಸಿಸಿಟಿವಿ,ಅಗ್ನಿ ಸುರಕ್ಷತಾ ವ್ಯವಸ್ಥೆ ಹೊಂದಿರಬೇಕು, ಮಾದಕ ವಸ್ತು ಸೇವನೆ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸ ಬಾರದು.ಇನ್ನೂ ವಿದೇಶಿ ಪ್ರಜೆಗಳ ಬಗ್ಗೆ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು.