ಪೆಟ್ರೋಲ್ -ಡಿಸೇಲ್ ಬೆಲೆ ಇಳಿಕೆ

ಗುರುವಾರ, 4 ನವೆಂಬರ್ 2021 (20:34 IST)
ಪೆಟ್ರೋಲ್ -ಡಿಸೇಲ್ ಬೆಲೆ ಇಳಿಕೆಯಾಗಿದ್ದನ್ನು ದೀಪಾವಳಿ ಗಿಫ್ಟ್ ಎಂದು ಬಣ್ಣಿಸಲಾಗುತ್ತಿದೆ. ಇದು ಯಾವ ರೀತಿಯ ಗಿಫ್ಟ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್  ಬಿಜೆಪಿ ವಿರುದ್ದ ಕಿಡಿ ಕಾರಿದ್ದಾರೆ. ಇಂದು ಸದಾಶಿವನಗರದ ನಿವಾಸದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿ ಅವರು, ನಿರಂತರವಾಗಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನ 50 ರೂಪಾಯಿ ಏರಿಸಿ, 5 ರೂಪಾಯಿ ಇಳಿಸಿದ್ರೆ ಹೇಗೆ ಗಿಫ್ಟ್ ಆಗುತ್ತದೆ. ಇಷ್ಟು ದಿನ ಪ್ರತಿನಿತ್ಯ ಸರ್ಕಾರಗಳು ಪಿಕ್ ಪ್ಯಾಕೆಟ್ ಮಾಡಿವೆ ಎಂದು ಆಕ್ರೋಶ ಹೊರ ಹಾಕಿದ್ರು. ಇದೇ ವೇಳೆ ಸರ್ಕಾರ ನೂರು ದಿನಗಳ ಪೂರೈಕೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಅವರು, ಮುಖ್ಯಮಂತ್ರಿಗಳಿ ಅವರ ಜಿಲ್ಲೆಯವರೇ ಬೈ ಎಲೆಕ್ಷನ್ ನಲ್ಲಿ  ತೀರ್ಪು ಕೊಟ್ಟಿದ್ದಾರೆ. ಮುಂದೆಯೂ ಅವರ ನಾಯಕತ್ವದಲ್ಲಿ ಚುನಾವಣೆ ಎಂದು ಹೇಳಿದ್ದಾರೆ. ಇದು ಬಹಳ ಸಂತೋಷದ ವಿಚಾರ ಎಂದು ಪರೋಕ್ಷವಾಗಿ ಸಿಎಂ ಬೊಮ್ಮಾಯಿ ನಾಯಕತ್ವವನ್ನು ವ್ಯಂಗ್ಯ  ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ