ತೈಲ ದರ ಹೆಚ್ಚಳ ಖಂಡಿಸಿ ಪ್ರತಿಭಟನೆ
ತೈಲ ದರ ಹೆಚ್ಚಳ ಖಂಡಿಸಿ ಕೆಆರ್ ಪುರ ಹಾಗೂನ ಮಹದೇವಪುರದಲ್ಲಿ ಸೈಕಲ್ ಹಾಗೂ ಜಟಕಾ ಬಂಡಿಯಲ್ಲಿ ಜಾಥಾ ನಡೆಸುವ ಮೂಲಕ ಪೆಟ್ರೋಲ್ , ಡಿಸೇಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದರು . ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಂಎಲ್ ಸಿ ನಾರಾಯಣಸ್ವಾಮಿ, 74 ವರ್ಷಗಳ ಸ್ವತಂತ್ರ ಭಾರತದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ತೈಲ ಬೆಲೆ ಏರಿಕೆಯಾಗಿದ್ದು ಇದು ಜನಸಾಮಾನ್ಯರ ಮೇಲೆ ಬರೆ ಎಳೆದಂತಾಗಿದೆ ಕರೋನಾ ಸಂಕಷ್ಟ ಸಮಯದಲ್ಲೂ ಈ ಏರಿಕೆ ಖಂಡನೀಯ .ಈ ಹಿಂದೆ ಪೆಟ್ರೋಲ್ ಡೀಸೆಲ್ ಬೆಲೆ ಪೈಸೆ ಲೆಕ್ಕದಲ್ಲಿ ಹೆಚ್ಚಳಕ್ಜೆ ಬಿಜೆಪಿ ರೋಡ್ ನಲ್ಲಿ ಕುಳಿತು ಪ್ರತಿಭಟನೆ ಮಾಡ್ತಿದ್ರು . ಹಾಗೀನ ಡಾ . ಮನಮೋಹನ್ ಸಿಂಗ್ ಆಡಳಿತದಲ್ಲಿ ತೈಲ ತೆರಿಗೆ 9 ರೂ ಗಳವರೆಗೆ ವಿಧಿಸಲಾಗಿತ್ತು , ಆದರೆ ಈಗಿನ ಬಿಜೆಪಿ ಸರ್ಕಾರ ಬರೋಬ್ಬರಿ 34 ರೂ ತೆರಿಗೆ ಹೇರಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ , ಈ ವಿಧಿಸಿರುವ ತೆರಿಗೆಯನ್ನು ಶೀಘ್ರದಲ್ಲೇ ಇಳಿಸಬೇಕು ಎಂದು ಆಗ್ರಹಿಸಿದ್ರು.